ಕಕ್ಕುಂಜೆ: ಯಂತ್ರದ ಸಹಾಯದಿಂದ ಸುಗ್ಗಿ ಬಿತ್ತನೆ
Update: 2020-11-19 19:20 IST
ಉಡುಪಿ, ನ.19: ಮುಂಗಾರು ಬಿತ್ತನೆ ಸಮಯದಲ್ಲಿ ಪರಿಸರದ ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಕೈಗೊಂಡ ತಂಡ ಇದರಿಂದ ಪಡೆದ ಯಶಸ್ಸಿನಿಂದ ಉತ್ತೇಜನ ಪಡೆದು ಇದೀಗ ಹಿಂಗಾರು ಸಂದರ್ಭದಲ್ಲಿ ಸುಗ್ಗಿ ಬೆಳೆ ತೆಗೆಯಲು ಮುಂದಾಗಿದೆ.
ಉಡುಪಿ ಸನಿಹದ ಕಕ್ಕುಂಜೆಯ ಸುಮಾರು ಒಂದು ಎಕ್ರೆ ಗದ್ದೆಯಲ್ಲಿ ಎರಡು ದಶಕಗಳ ಬಳಿಕ ಮೊದಲ ಬಾರಿಗೆ ಕೃಷಿಯಂತ್ರದ (ಡ್ರಂ ಸೀಡಿಂಗ್) ಸಹಾಯ ದಿಂದ ಸುಗ್ಗಿ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಲಾಗಿದೆ.
ಪ್ರಗತಿಪರ ಕೃಷಿಕರಾದ ರವೀಂದ್ರನಾಥ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭ ಗೊಂಡ ಈ ವಿಶೇಷ ಕೃಷಿ ಚಟುವಟಿಕೆಯ ಸಂದರ್ಭದಲ್ಲಿ ನಿಟ್ಟೂರು ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಮುರಲಿ ಕಡೆಕಾರ್, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ, ಭಾಸ್ಕರ ಡಿ. ಸುವರ್ಣ, ಪಿ.ದಿನೇಶ ಪೂಜಾರಿ, ಶ್ರೀಕಾಂತ ಶೆಟ್ಟಿ, ರವಿ ಶೆಟ್ಟಿ ಮುಂತಾದ ಕೃಷಿಕರು ಉಪಸ್ಥಿತರಿದ್ದರು.
ಈ ಬಾರಿಯ ಹಡಿಲು ಗದ್ದೆ ಕೃಷಿ ಅಭಿಯಾನದಲ್ಲಿ ರವೀಂದ್ರನಾಥ ಶೆಟ್ಟರು ಐದು ಎಕರೆ ಗದ್ದೆಯಲ್ಲಿ ಭತ್ತದ ಬೇಸಾಯವನ್ನು ಮಾಡಿದ್ದರು.