ಬ್ರಹ್ಮಾವರ: ವಾಟ್ಸಾಪ್ ಗ್ರೂಪಿನಿಂದ ಮನೆ ನಿರ್ಮಿಸಿ, ಹಸ್ತಾಂತರ

Update: 2020-11-19 13:59 GMT

ಬ್ರಹ್ಮಾವರ, ನ.19: ‘ದೇವರ ಮಕ್ಕಳು ನಾವು’ ವಾಟ್ಸಾಪ್ ಗ್ರೂಪಿನಿಂದ ಎರಡನೇ ಯೋಜನೆಯಾಗಿ ನೀಲಾವರದ ಗುಡ್ಡೆಅಂಗಡಿಯ ಸಿಲ್ವಿಯಾ ಡಿಸೋಜ ಅವರಿಗೆ ಮನೆ ನಿರ್ಮಿಸಿ ಹಸ್ತಾಂತರ ಮಾಡುವ ಕಾರ್ಯಕ್ರಮವು ನ.14ರಂದು ಜರಗಿತು.

ಅಧ್ಯಕ್ಷತೆಯನ್ನು ಅಮ್ಮುಂಜೆ ಸಂತ ಅಂತೋನಿ ಇಗರ್ಜಿಯ ಧರ್ಮಗುರು ವಂ.ಲಾರೆನ್ಸ್ ಡೇವಿಡ್ ಕ್ರಾಸ್ತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಮಾಜಿ ತಾಪಂ ಸದಸ್ಯೆ ವೆರೋನಿಕಾ ಕರ್ನೇಲಿಯೋ ಮಾತನಾಡಿದರು. ವೇದಿಕೆಯಲ್ಲಿ ನೀಲಾವರ ಗ್ರಾಪಂ ಮಾಜಿ ಉಪಾಧ್ಯಕ್ಷ ರಮೇಶ್ ಪೂಜಾರಿ, ಹಾರಾಡಿ ಗ್ರಾಪಂ ಮಾಜಿ ಉಪಾಧ್ಯಕ್ಷ ಕುಮಾರ ಸುವರ್ಣ, ಉದ್ಯಮಿ ಬೋನಿಫಾಸ್ ಮಸ್ಕರೇನ್ಹಸ್ ಉಪಸ್ಥಿತರಿದ್ದರು.

ಈ ಗ್ರೂಪಿನ ಮೂರನೇ ಯೋಜನೆಯಾಗಿ 20ಕ್ಕೂ ಅಧಿಕ ಅಶಕ್ತರು, ಅಂಗವಿಕಲರು, ಮನೋರೋಗಿಗಳು, ವಿಧವೆಯರು, ಅನಾರೋಗ್ಯ ಪೀಡಿತ ರಿಗೆ ಸಹಾಯಧನವನ್ನು ಮತ್ತು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.

ಗ್ರೂಪಿನ ಎಡ್ಮಿನ್ ಮ್ಯಾಕ್ಷಿಮ್ ಮಸ್ಕರೇನ್ಹಸ್, ಬ್ರದರ್ ರೋನಿ ನೊರೊನ್ಹಾ ಮೊದಲಾದವರು ಹಾಜರಿದ್ದರು. ಮಾರ್ಕ್ ಡಿಸೋಜ ಸ್ವಾಗತಿಸಿ ದರು. ಮೀನಾ ಡಿಸೋಜ ದಾನಿಗಳ ಹೆಸರನ್ನು ವಾಚಿಸಿದರು. ಮೆಲಿಶಾ ಡಿಸೋಜ ವಂದಿಸಿ ದರು. ವಲೇರಿಯನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News