ಹೆಬ್ರಿ: ಓದುವ ಬೆಳಕು ಅಭಿಯಾನ ಉದ್ಘಾಟನೆ

Update: 2020-11-19 14:00 GMT

ಹೆಬ್ರಿ, ನ.19: ಕರ್ನಾಟಕ ಪಂಚಾಯತ್‌ರಾಜ್ ಆಯುಕ್ತಾಲಯ, ಉಡುಪಿ ಜಿಪಂ, ತಾಪಂ, ಹೆಬ್ರಿ ಗ್ರಾಪಂ ವತಿಯಿಂದ ಓದುವ ಬೆಳಕು ಅಭಿಯಾನ, ಮಕ್ಕಳಿಗೆ ಉಚಿತ ನೋಂದಣಿ ಕಾರ್ಯಕ್ರಮ ಹೆಬ್ರಿ ಗ್ರಂಾಲಯದಲ್ಲಿ ನ.19ರಂದು ನಡೆಯಿತು.

ಹೆಬ್ರಿ ಪಿಡಿಓ ಸದಾಶಿವ ಸೇರ್ವೇಗಾರ್ ಮಾತನಾಡಿ, ನ.14ರಿಂದ ಡಿ.14 ರವರೆಗೆ ಗ್ರಾಪಂ ವ್ಯಾಪ್ತಿಯ 6-18 ವರ್ಷದವೆರೆಗಿನ ಮಕ್ಕಳು ಹೆಬ್ರಿ ಗ್ರಂಥಾ ಲಯದಲ್ಲಿ ಉಚಿತ ನೋಂದಣಿ ಮೂಲಕ ಪುಸ್ತಕ ಪಡೆದು ಓದಬಹುದು. ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳುವುದರೊಂದಿಗೆ ಪುಸ್ತಕ ಓದುವುದರ ಮೂಲಕ ಮನರಂಜನೆಯೂ ಸಿಗಲು ಸಾಧ್ಯ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಮಕ್ಕಳಿಗೆ ಓದುವ ಹವ್ಯಾಸ ಬೆಳೆಯಲು ಗ್ರಂಥಾಲಯ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗೆ ಮಹತ್ವ ನೀಡಿದಂತೆ ಪುಸ್ತಕ ಓದಿಗೂ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ಸಿಆರ್‌ಪಿ ಕೃಷ್ಣರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಸುಧಾಕರ ಹೆಗ್ಡೆ, ನಿವೃತ್ತ ಶಿಕ್ಷಕ ಬೆಪ್ಡೆ ಸಂಜೀವ ಶೆಟ್ಟಿ, ಹೆಬ್ರಿ ತಾಲೂಕು ಕ.ಸಾ.ಪ ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮ ಮೊದಲಾದವರು ಉಪಸ್ಥಿತರಿದ್ದರು.

ಗ್ರಂಥಪಾಲಕಿ ಪುಷ್ಪಾವತಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News