ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕಿ ಇಂದಿರಾಗಾಂಧಿ : ಸೊರಕೆ

Update: 2020-11-19 14:07 GMT

ಕಾಪು :  ತನ್ನ ದಿಟ್ಟ, ನೇರ ಮತ್ತು ಕ್ರಾಂತಿಕಾರಿ ನಡೆ- ನಿಲುವುಗಳಿಂದಾಗಿ "ಉಕ್ಕಿನ ಮಹಿಳೆ" ಎಂಬ ಖ್ಯಾತಿಯನ್ನು ಪಡೆದು, ದೇಶದ ಅಭಿವೃದ್ಧಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ದೇಶಕ್ಕಾಗಿ ಪ್ರಾಣಾರ್ಪಣೆಗೈದ ಧೀರ ಮತ್ತು ಮಹಾನ್ ಕ್ರಾಂತಿಕಾರಿ ನಾಯಕಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಇಂದಿರಾಗಾಂಧಿ ಯವರ 103 ನೇ ಜನ್ಮದಿನದ ಅಂಗವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು, ಕಾಪು ನಗರ ಕಾಂಗ್ರೆಸ್ ಸಮಿತಿಯ ಸಹಭಾಗಿತ್ವದಲ್ಲಿ ನಗರ ಸಮಿತಿಯ ಮಹಿಳಾ ಘಟಕದ ನೇತೃತ್ವದಲ್ಲಿ "ಕಾಪು ರಾಜೀವ್ ಭವನ"ದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದೇ ವೇಳೆ ಬಡ ದಲಿತ ಮಹಿಳೆಯರಿಗೆ ಕಾಪು ನಗರ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ವತಿಯಿಂದ ಕೊಡಮಾಡಿದ ಸೀರೆ ಮತ್ತು ಸಿಹಿ ತಿಂಡಿಯನ್ನು ಸೊರಕೆಯವರು ವಿತರಿಸಲಾಯಿತು.

ಸಭಾಧ್ಯಕ್ಷತೆಯನ್ನು ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ನವೀನಚಂದ್ರ ಸುವರ್ಣ ವಹಿಸಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಎಂ. ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಬಲ್ಲಾಳ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರಭಾ ಶೆಟ್ಟಿ, ಕಾಪು ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು. ಸಿ. ಶೇಖಬ್ಬ, ಕಾಪು ಪುರಸಭೆಯ ಉಪಾಧ್ಯಕ್ಷೆ ಮಾಲಿನಿ, ಮಹಿಳಾ ಮುಖಂಡರಾದ ಶಾಂತಲತಾ ಎಸ್.ಶೆಟ್ಟಿ, ಸೌಮ್ಯ ಎಸ್., ಅಶ್ವಿನಿ ನವೀನ್, ಸರಸು ಡಿ. ಬಂಗೇರ, ಸುಲೋಚನಾ ಬಂಗೇರ, ಲೀಲಾ ಕೋಟ್ಯಾನ್, ಜ್ಯೋತಿ ಮೆನನ್, ಸುಚರಿತ ಲಕ್ಷ್ಮಣ್, ಆಶಾ ಅಂಚನ್ ಕಟಪಾಡಿ, ಸಂಧ್ಯಾ ಬಿ. ಕೋಟ್ಯಾನ್, ಪ್ರಮೀಳಾ ಜತನ್ನ, ಶಾರದಾ ಪೂಜಾರ್ತಿ, ಸುರೇಖಾ ಸುರೇಂದ್ರ ಶೆಟ್ಟಿ ಹಾಗೂ
ಪಕ್ಷದ ಪ್ರಮುಖ ನಾಯಕರಾದ ದೀಪಕ್ ಎರ್ಮಾಳ್, ಪ್ರಶಾಂತ್ ಜತನ್ನ, ವೈ. ಸುಧೀರ್, ಎಚ್. ಅಬ್ದುಲ್ಲಾ, ರಾಜೇಶ್ ಶೆಟ್ಟಿ ಪಾಂಗಳ, ಇಮ್ರಾನ್ ಮಜೂರ್, ಹರೀಶ್ ನಾಯಕ್ ಕಾಪು, ನಾಗೇಶ್ ಸುವರ್ಣ, ಕೆ. ಎಚ್.ಉಸ್ಮಾನ್, ಗಣೇಶ್ ಕೋಟ್ಯಾನ್, ಸೌರಭ್ ಬಲ್ಲಾಳ್, ಫಾರೂಕ್ ಚಂದ್ರನಗರ, ಶ್ರೀಕರ್ ಅಂಚನ್ ಕಟಪಾಡಿ, ಮಹಮ್ಮದ್ ನಯೀಮ್, ಹಸನ್ ಕಂಚಿನಡ್ಕ, ಸತೀಶ್ ಡೇಜಾಡಿ, ಸುಧೀರ್ ಕರ್ಕೇರ, ಕರುಣಾಕರ ಪೂಜಾರಿ,ಗೋಪಾಲ್ ಪೂಜಾರಿ ಮತ್ತಿತರ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾಪು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಸಾದಿಕ್ ಸ್ವಾಗತಿಸಿದರು, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಸಾಲ್ಯಾನ್ ಧನ್ಯವಾದವಿತ್ತರು, ಬ್ಲಾಕ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News