ಕೋವಿಡ್ ಪ್ರಕರಣ ಹೆಚ್ಚಳ: ದೇಶದ ಈ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇರಿಕೆ

Update: 2020-11-19 14:51 GMT

ಅಹ್ಮದಾಬಾದ್: ನಗರದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನ ಅಧಿಕಾರಿಗಳು ರಾತ್ರಿ 9ರಿಂದ ಬೆಳಗ್ಗೆ 6ರ ತನಕ ಕರ್ಫ್ಯೂ ವಿಧಿಸಲು ನಿರ್ಧರಿಸಿದ್ದಾರೆ.  ಕರ್ಫ್ಯೂ ಶುಕ್ರವಾರದಿಂದ ಜಾರಿಗೆ ಬರಲಿದ್ದು, ಅನಿರ್ದಿಷ್ಟಾವಧಿಗೆ ಇರಲಿದೆ. ಗುಜರಾತ್ ನ ಈ ನಗರದಲ್ಲಿ ಬುಧವಾರದ ತನಕ ಒಟ್ಟು 46,022 ಪ್ರಕರಣಗಳು ವರದಿಯಾಗಿವೆ.

ಹಬ್ಬಗಳ ಋತುವಿನಲ್ಲಿ ಕೋವಿಡ್ ಕೇಸ್ ಗಳು ಹೆಚ್ಚಲಿವೆ ಎಂದು ಅಧಿಕಾರಿಗಳು ಈ ಮೊದಲೇ ಎಚ್ಚರಿಕೆ ನೀಡಿದ್ದರು.

ಹೊಸ ಕೋವಿಡ್ ರೋಗಿಗಳಿಗೆ ನಗರದ ಆಸ್ಪತ್ರೆಗಳಲ್ಲಿ ಶೇ. 40ರಷ್ಟು ಹಾಸಿಗೆ ಲಭ್ಯವಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News