ದ.ಕ.ಜಿಲ್ಲೆ : ಕೊರೋನದಿಂದ ಮೃತಪಟ್ಟವರ ಸಂಖ್ಯೆ 700ಕ್ಕೇರಿಕೆ

Update: 2020-11-19 14:58 GMT

ಮಂಗಳೂರು, ನ.19: ದ.ಕ.ಜಿಲ್ಲೆಯಲ್ಲಿ ಗುರುವಾರ ಇಬ್ಬರು ಮೃತಪಡುವುದರೊಂದಿಗೆ ಈವರೆಗೆ ಕೋವಿಡ್ 19ಗೆ ಬಲಿಯಾದವರ ಸಂಖ್ಯೆ 700ಕ್ಕೇರಿದೆ.

ಈವರೆಗೆ 3,18,605 ಮಂದಿಯನ್ನು ತಪಾಸಣೆಗೊಳಪಡಿಸಲಾಗಿದೆ. ಆ ಪೈಕಿ 2,87,167 ಮಂದಿಯ ವರದಿ ನೆಗೆಟಿವ್ ಮತ್ತು 31,438 ಮಂದಿಯ ವರದಿ ಪಾಸಿಟಿವ್ ಬಂದಿದೆ.

ಗುರುವಾರ 54 ಮಂದಿಗೆ ಕೊರೋನ ಪಾಸಿಟಿವ್ ಆಗಿದ್ದು, 54 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಈವರೆಗೆ ಗುಣಮುಖರಾದವರ ಸಂಖ್ಯೆ 30,073ಕ್ಕೇರಿದೆ. ಅಲ್ಲದೆ ಮೃತಪಟ್ಟವರ ಸಂಖ್ಯೆ 700ಕ್ಕೇರಿದೆ. ಗುರುವಾರದವರೆಗೆ ಜಿಲ್ಲೆಯಲ್ಲಿ 665 ಸಕ್ರಿಯ ಪ್ರಕರಣಗಳಿವೆ.

ಮಾಸ್ಕ್ ಧರಿಸದೆ ಕೋವಿಡ್ -19 ನಿಯಮ ಉಲ್ಲಂಘಿಸಿದ ಘಟನೆಗೆ ಸಂಬಂಧಿಸಿ ಈವರೆಗೆ 13,493 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ 14,59,642 ರೂ.ವನ್ನು ಸಂಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News