ಕೆನರಾ ಬ್ಯಾಂಕಿನ 125ನೇ ಸಂಸ್ಥಾಪಕ ದಿನ
Update: 2020-11-19 20:42 IST
ಮಂಗಳೂರು, ನ.19: ಕೆನರಾ ಬ್ಯಾಂಕ್‌ನ 125ನೇ ಸಂಸ್ಥಾಪಕ ದಿನದಂದು, ದಿ ಇನ್‌ಸ್ಟ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ, ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಎಸ್.ಎಸ್.ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕೆನರಾ ಬ್ಯಾಂಕಿನ ಮಂಗಳೂರು ವೃತ್ತದ ಮಹಾ ಪ್ರಬಂಧಕ ಬಿ. ಯೋಗೀಶ್ ಆಚಾರ್ಯ, ಉಪ ಮಹಾ ಪ್ರಬಂಧಕ ರಾಘವ ನಾಯ್ಕ್ ಹಾಗೂ ಬಾಲಮುಕುಂದ್ ಶರ್ಮಾ, ಪ್ರಾದೇಶಿಕ ಮುಖ್ಯಸ್ಥೆ ಮತ್ತು ಉಪ ಮಹಾ ಪ್ರಬಂಧಕಿ ಸುಚಿತ್ರಾ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಎಸ್.ಎಸ್.ನಾಯಕ್, ಕೆನರಾ ಬ್ಯಾಂಕಿನೊಂದಿಗಿರುವ ತಮ್ಮ ಬಾಂಧವ್ಯವನ್ನು ಸ್ಮರಿಸಿಕೊಂಡರು.