×
Ad

ನ. 21: ತುಳು ವೆಬಿನಾರ್ ಸರಣಿ ಉಪನ್ಯಾಸ ಕಾರ್ಯಕ್ರಮದ ರಜತ ಸಂಭ್ರಮ

Update: 2020-11-19 20:50 IST

ಮಂಗಳೂರು, ನ.19: ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಸರಣದ ದೃಷ್ಟಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗ ವಿವಿ ಸಂಧ್ಯಾ ಕಾಲೇಜು ಮಂಗಳೂರು ಪ್ರಾರಂಭಿಸಿದ ವೆಬಿನಾರ್ ಸರಣಿ ಉಪನ್ಯಾಸ ಕಾರ್ಯಕ್ರಮದ ರಜತ ಸಂಭ್ರಮವು ನ.21ರಂದು ನಡೆಯಲಿದೆ.

25ನೇ ವೆಬಿನಾರ್ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಎಂಎ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹಬಾಗಿತ್ವದಲ್ಲಿ ನ.21ರ ಶನಿವಾರ ಸಂಜೆ 5ಕ್ಕೆ ಡಾ.ವೀರೇಂದ್ರ ಹೆಗ್ಗಡೆಯ ಸಮ್ಮುಖದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಯಸ್.ಯಡಪಡಿತ್ತಾಯ ವಹಿಸುವರು.

‘ಮನೆ-ಮನಗಳಲ್ಲಿ’ ತುಳು ಎಂಬ ವಿಷಯದ ಕುರಿತು ಪತ್ರಕರ್ತ ಮನೋಹರ್ ಪ್ರಸಾದ್ ಉಪನ್ಯಾಸ ನೀಡುವರು. ಅತಿಥಿಯಾಗಿ ಉದ್ಯಮಿ ಸುನೀಲ್ ಆಚಾರ್ ಭಾಗವಹಿಸುವರು. ಮಂಗಳೂರು ವಿವಿ ಕುಲಸಚಿವ ರಾಜು ಮೊಗವೀರ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News