ತುರ್ತು ಪರಿಸ್ಥಿತಿಯಲ್ಲೂ ಸುಪ್ರೀಂಕೋರ್ಟ್ ನ ಘನತೆ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ: ಪ್ರಶಾಂತ್ ಭೂಷಣ್

Update: 2020-11-19 16:34 GMT

ಹೊಸದಿಲ್ಲಿ: ಭಾರತದ ಸುಪ್ರೀಂಕೋರ್ಟ್ ನ ಘನತೆ ಇತಿಹಾಸದಲ್ಲಿ ಅತ್ಯಂತ ಕೆಳ ಮಟ್ಟಕ್ಕೆ ಕುಸಿದಿದೆ ಎಂದು ಪ್ರತಿಪಾದಿಸಿದ  ಹಿರಿಯ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್  ತುರ್ತು ಪರಿಸ್ಥಿತಿಯಲ್ಲೂ ಇಷ್ಟೊಂದು ಕೆಳ ಮಟ್ಟಕ್ಕೆ ಕುಸಿದಿರಲಿಲ್ಲ ಎಂದು ಹೇಳಿದ್ದಾರೆ.

 ನಾನು 40ಕ್ಕೂ ಅಧಿಕ ವರ್ಷಗಳಿಂದ ಸುಪ್ರೀಂಕೋರ್ಟ್ ನ್ನು ನೋಡುತ್ತಿದ್ದೇನೆ. ನಿವೃತ್ತ ನ್ಯಾಯಾಧೀಶರು, ವಕೀಲರುಗಳು, ದೂರುದಾರರು ಹಾಗೂ ನಾಗರಿಕರು ಸುಪ್ರೀಂಕೋರ್ಟ್ ನ ಕುರಿತು ಇಷ್ಟೊಂದು ಬೇಸರ ವ್ಯಕ್ತಪಡಿಸಿದ್ದನ್ನು ಹಾಗೂ ನಿಂದಿಸಿರುವುದನ್ನು ನಾನು ಈ ತನಕ ನೋಡಿಲ್ಲ. ಸುಪ್ರೀಂಕೋರ್ಟ್ ನ ಘನತೆಯು ತುರ್ತು ಪರಿಸ್ಥಿತಿಯ ಅವಧಿಗಿಂತಲೂ ಕೆಳಕ್ಕೆ ಇಳಿದಿದೆ ಎಂದು ಧೈರ್ಯವಾಗಿ ಹೇಳಬಲ್ಲೆ ಎಂದು ಗುರುವಾರ ಟ್ವಟ್ಟರ್ ನಲ್ಲಿ ಪ್ರಶಾಂತ್ ಭೂಷಣ್ ಬರೆದಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ ಸ್ವಾತಂತ್ರ್ಯದ ಕುರಿತು ಜಸ್ಟಿಸ್ ಶಾ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟ್ ಇನ್ನು ಮುಂದೆ ಸ್ವಾತಂತ್ರ್ಯದ ಪ್ರಮುಖ ರಕ್ಷಕನಾಗಿರುವುದಿಲ್ಲ ಎಂದರು.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸರಕಾರ ಸಾಕಷ್ಟು ಹಾನಿ ಮಾಡಿದೆ. ನ್ಯಾಯಾಲಯಗಳು ವಿಶೇಷವಾಗಿ ಸುಪ್ರೀಂಕೋರ್ಟ್ ಇಂತಹ ತಾರತಮ್ಯ ಹಾಗೂ ಭಿನ್ನಾಭಿಪ್ರಾಯವನ್ನು ಹಿಂಸಾತ್ಮಕವಾಗಿ ತುಳಿದುಹಾಕುವುದನ್ನು ಮೂಕ ಪ್ರೇಕ್ಷಕನಂತೆ ನೋಡುತ್ತಿದೆ ಎಂದು ಜಸ್ಟಿಸ್ ಶಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News