ಕಾರ್ಕಳ : ರಾಷ್ಟ್ರೀಯ ಪತ್ರಿಕಾ ದಿನಾಚರಣೆ

Update: 2020-11-19 16:10 GMT

ಕಾರ್ಕಳ : ವಿಶ್ವರಲ್ಲಿಯೇ ಭಾರತದ ಪತ್ರಿಕಾರಂಗಕ್ಕೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ. ವಿಫುಲ ಅವಕಾಶಗಳಿವೆ.  ಭವಿಷ್ಯದ ಕಡೆಗೆ ಗಮನಹರಿಸುವ ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಸಾಮಾಜಿಕ ಜಾಲತಾಣಗಳಿಂದ ಹಾಗೂ ದಿನದ 24ಗಂಟೆಗಳ ಕಾಲ ಸುದ್ದಿ ಮಾಹಿತಿ ಒದಗಿಸುವ ಸುದ್ದಿಜಾಲಗಳ ನಡುವೆ ಪತ್ರಿಕೆಗಳು ನಿರ್ವಹಣೆಯು ಅತ್ಯಂತ  ನಿಖರ ಹಾಗೂ ವಿಶ್ವಾಸರ್ಹ ಮೂಡಿಸುವುದು ಅಗತ್ಯವಾಗಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್ ಹೇಳಿದರು.

ಕಾರ್ಕಳ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪತ್ರಿಕಾ ರಂಗದಲ್ಲಿ ಉಂಟಾದ ಶಿಥಿಲತೆ, ಆರ್ಥಿಕ ಸಮಸ್ಸೆ, ಬಂಡವಾಳ ಶಾಹಿಗಳ ಹಿಡಿತ, ರಾಜಕೀಯ ದೃಷ್ಠಿಕೋನದಿಂದಾಗಿ ಪತ್ರಿಕಾ ರಂಗದ ಅಂತರ್ ಶಕ್ತಿ ಕದಡುತ್ತಿವೆ. ವ್ಯವಹಾರಿಕ ಜಗತ್ತಿನಲ್ಲಿ ಪತ್ರಿಕಾ ರಂಗದ ಮೌಲ್ಯವನ್ನು ಕಡಿಮೆ ಮಾಡುವ ಸಂಗತಿಗಳು ಹಲವು ಇವೆ. ಮೌಲ್ಯ ಗಳೊಂದಿಗೆ ಗುದ್ದಾಡುವಾಗ ಶೇಷ್ಠತೆಯನ್ನ ಒರಗೆ ಹಚ್ಚಿ ನೋಡಬೇಕಾಗುತ್ತದೆ ಎಂದರು.

ರಾಜಕೀಯ ವಿಚಾರಕ್ಕೆ ಪತ್ರಿಕಾ ರಂಗವು ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದರೂ ಸಮಾಜದ ಅಂತರ್ ಶಕ್ತಿ ಪ್ರತಿಬಿಂಬಿತವಾಗುವ ಶಕ್ತಿಯನ್ನು ಹೊರಹಾಕುತ್ತಿವೆ. ಸಿದ್ಧಾಂತಗಳಿಗೆ ಬದ್ಧತೆ ಹೊಂದಿರುವ ಪತ್ರಿಕೆಗಳು ದೇಶದ  ಇತಿಹಾಸ, ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಬೇಕೆಂಬ ನಿಲುವನ್ನು ವ್ಯಕ್ತಪಡಿಸಿದರು.

ದೇಶದಲ್ಲಿ ನಾಲ್ಕನೇ ಅಂಗವೆಂದು ಪತ್ರಿಕಾ ರಂಗವನ್ನು ಪರಿಗಣಿಸಿದರೂ, ಸಂವಿಧಾನ ನೀಡದ ಸ್ಥಾನ ಮಾನವನ್ನು ಜನಮಾನಸ ನೀಡಿದೆ ಎಂದರು. ಪತ್ರಕರ್ತರಾಗಿದ್ದು ಇದೀಗ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

ಸಾಮಾಜಿಕ ಹೋರಾಟಗಾರ ಜಯನ್ ಮಲ್ಪೆ-ಜನದನಿ ಸಿರಿ, ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ  ಬೈಲೂರು-ಜಾಗೃತಿ ಸಿರಿ,  ನಿವೃತ್ತ ಆರೋಗ್ಯಾಧಿಕಾರಿ ಎಂ.ಸುಂದರ ಪೂಜಾರಿ- ಸೇವಾ ಸಿರಿ, ಏಕಲವ್ಯ ಪ್ರಶಸ್ತಿ, ಪುರಸ್ಕೃತೆ ಅಕ್ಷತಾ ಬೋಳ-ವಿಕ್ರಮ ಸಿರಿ, ಸಮಾಜ ಸೇವಕ ಮಹಮ್ಮದ್ ಶರೀಫ್- ಕಾಯಕ ಸಿರಿ, ಚಿತ್ರಕಲಾವಿದ ವಿಜಯ ಪರವ -ವರ್ಣ ಸಿರಿ ಹಾಗೂ  ಪತ್ರಿಕಾ ವಿತರಕರಾದ ಸತೀಶ್ ಪೈ ಸಾಣೂರು, ದಿವಾಕರ ಆಚಾರ್ಯ ದುರ್ಗಾ ಇವರಿಗೆ ಶ್ರಮ ಸಿರಿ ಪ್ರಶಸ್ತಿ ಸ್ವೀಕರಿಸಿದರು. 

ಸನ್ಮಾನ ಸ್ವೀಕರಿಸಿ ಜಯನ್ ಮಲ್ಪೆ, ಸುಂದರ ಪೂಜಾರಿ, ಸುಮಿತ್ ಬೈಲೂರು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದರು. 

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪಾಂಡೇಲು ಅಧ್ಯಕ್ಷತೆ ವಹಿಸಿದರು. ಉದ್ಯಮಿ ಮಹಮ್ಮದ್ ಗೌಸ್, ನಲ್ಲೂರು ಕೃಷ್ಣ ಶೆಟ್ಟಿ, ಕಾರ್ಕಳ ಪುರಸಭೆಯ ನಿಟಕಪೂರ್ವ ಕೌನ್ಸಿಲರ್ ಪಾಶ್ರ್ವನಾಥ ವರ್ಮ, ಸಾಮಾಜಿಕ ಕಾರ್ಯಕರ್ತ ಆಗಸ್ಟಿನ್, ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ಸಾಣೂರು ಮೊದಲಾದವರು ಉಪಸ್ಥಿತರಿದ್ದರು. 

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ.ಜಗದೀಶ್ ಸ್ವಾಗತಿಸಿದರು.ಕೋಶಾಧಿಕಾರಿ ವಿಲಾಸ ಕುಮಾರ್ ನಿಟ್ಟೆ ಧನ್ಯವಾದವಿತ್ತರು.  ಜಿಲ್ಲಾ ಕಮಿಟಿ  ಸದಸ್ಯ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News