×
Ad

ಅಭೀಷ್ ಸ್ಕ್ವೇರ್ ವಸತಿ ಸಮುಚ್ಚಯದಲ್ಲಿ ಮನೆ ಖರೀದಿಗೆ ಮಾಸಿಕ ಕಂತು ಯೋಜನೆ

Update: 2020-11-19 23:25 IST

ಮಂಗಳೂರು : ಅಭೀಷ್ ಬಿಲ್ಡರ್ಸ್ ಸಂಸ್ಥೆಯ ಹೊಸ ಯೋಜನೆ ಅಭೀಷ್ ಸ್ಕ್ವೇರ್ ನಲ್ಲಿ ಮಾಸಿಕ ಕಂತಿನಡಿ ಮನೆ ಖರೀದಿ ಯೋಜನೆ ಘೋಷಿಸಿದ್ದು, ಮಾಸಿಕ ಯೋಜನೆಯ ಮೇಳವು ನ. 21ರಿಂದ 24ರ ವರೆಗೆ ಯೆಯ್ಯಾಡಿಯ ಬಳಿಯ ಸೈಟ್‍ನಲ್ಲಿ ಆಯೋಜಿಸಲಾಗಿದೆ.

ಗ್ರಾಹಕರು ಈ ಮೇಲಿನ ದಿನಾಂಕದಲ್ಲಿ ಸೈಟ್‍ಗೆ ಭೇಟಿ ನೀಡಿ ಒಂದು ಬೆಡ್ ರೂಂ ಮನೆಗೆ 17 ಸಾವಿರ ಹಾಗೂ ಎರಡು ಬೆಡ್ ರೂಂನ ಮನೆಗೆ 24 ಸಾವಿರ ರೂ. ಪಾವತಿಸಿ ಮನೆ ಬುಕ್ ಮಾಡಬಹುದಾಗಿದೆ. ಡೌನ್‍ಪೇಮೆಂಟ್‍ನ ಉಳಿದ ಮೊತ್ತವನ್ನು 36 ಮಾಸಿಕ ಕಂತಿನ ಮೂಲಕ ಪಾವತಿಸಬಹುದು ಎಂದು ಅಭೀಷ್ ಬಿಲ್ಡರ್ಸ್ ಸಂಸ್ಥೆಯ ಆಡಳಿತ ನಿರ್ದೇಶಕ ಪುಷ್ಪರಾಜ್ ಜೈನ್ ತಿಳಿಸಿದ್ದಾರೆ.

ಕೆಪಿಟಿ ಸರ್ಕಲ್‍ನಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿ ಅರ್ಧ ಕಿ.ಮೀ. ದೂರದಲ್ಲಿ ಅಭೀಷ್ ಸ್ವ್ಕೇರ್ ಸಮುಚ್ಚಯ ನಿರ್ಮಾಣ ವಾಗುತ್ತಿದ್ದು, ಹಿಂಭಾಗದ ಹಚ್ಚ ಹಸಿರಿನ ಗುಡ್ಡ ಸಮುಚ್ಚಯದ ಆಕರ್ಷಣೆಯನ್ನು ಹೆಚ್ಚಿಸಿದೆ. 10 ಅಂತಸ್ತಿನ ಈ ಸಮುಚ್ಚಯದಲ್ಲಿ 100 ಫ್ಲ್ಯಾಟ್ ನಿರ್ಮಾಣವಾಗಲಿದೆ. ಪ್ರತಿಯೊಂದು ಮಹಡಿಯಲ್ಲೂ ಹತ್ತು ಮನೆಗಳು ಇರುತ್ತವೆ.

100 ಮನೆಗಳನ್ನು ವಾಸ್ತು ಪ್ರಧಾನವಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇಡೀ ವಸತಿ ಸಮುಚ್ಚಯ ಮಾತ್ರವಲ್ಲದೆ ಪ್ರತಿಯೊಂದು ಮನೆಗಳು ಕೂಡಾ ವಾಸ್ತು ಆಧಾರದಲ್ಲಿ ವಿನ್ಯಾಸಗೊಳಿಸಿ ನಿರ್ಮಾಣ ಮಾಡಲಾಗುತ್ತಿದೆ.

`ಅಭೀಷ್ ಸ್ವ್ಕೇರ್' ಸಮುಚ್ಚಯದಲ್ಲಿ ಕೈಗೆಟಕುವ ದರದಲ್ಲಿ ಫ್ಲ್ಯಾಟ್‍ಗಳನ್ನು ಖರೀದಿಸುವ ಸದಾವಕಾಶ ಗ್ರಾಹಕರಿಗೆ ಒಲಿದು ಬಂದಿದೆ. ಜನಸಾಮಾನ್ಯರೂ ಪ್ರೈಮ್ ಲೋಕೇಷನ್‍ನಲ್ಲಿ ಗುಣಮಟ್ಟದ, ಅಂತಾರಾಷ್ಟ್ರೀಯ ಶೈಲಿಯ ಆಕರ್ಷಕ ಫ್ಲ್ಯಾಟ್ ಖರೀದಿ ಮಾಡಬಹುದಾಗಿದೆ.

ಅಭೀಷ್ ಸ್ಕ್ವೇರ್

ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸುವ ಎಲ್ಲ ಸಲಕರಣೆ ಮತ್ತು ಫಿಟ್ಟಿಂಗ್‍ಗಳು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿರುತ್ತವೆ. ಗ್ರಾಹಕರು ಸಂಸ್ಥೆಗೆ ಭೇಟಿ ನೀಡಿದರೆ ಖುದ್ದಾಗಿ ಯೋಜನೆಯನ್ನು ಪ್ರಾತ್ಯಕ್ಷಿಕೆ ಪರಿಶೀಲಿಸಿ ಪರಿಸರವನ್ನು ಖಾತರಿ ಪಡಿಸಿಕೊಂಡು ಖರೀದಿ ಮಾಡಬಹು ದಾಗಿದೆ. ಈ ಹಿನ್ನೆಲೆಯಲ್ಲ ಯಾರ್ಡ್‍ನಲ್ಲೇ ಮೇಳ ಆಯೋಜಿಸಲಾಗಿದೆ.

ನಗರದ ಪ್ರೈಮ್ ಲೋಕೇಷನ್‍ನಲ್ಲಿ ನಿರ್ಮಾಣವಾಗುವ ಈ ವಸತಿ ಸಮುಚ್ಚಯವು ಚತುಷ್ಪತ ಕಾಂಕ್ರೀಟ್ ರಸ್ತೆಗೆ ತಾಗಿಕೊಂಡು ನಿರ್ಮಾಣ ವಾಗುತ್ತಿದೆ. ಇದರಲ್ಲಿ ಮೂರು ಲೆವೆಲ್‍ನ ಪಾರ್ಕಿಂಗ್, ಅತ್ಯಾಧುನಿಕ ಸೌಲಭ್ಯದಿಂದ ಕೂಡಿದೆ.

ಸ್ವಚ್ಛಂದ ಜೀವನಕ್ಕೆ ಪರಿಪೂರ್ಣ ಸಮುಚ್ಚಯ ಇದಾಗಿದ್ದು, ಮಲ್ಟಿ ಜಿಮ್, ಮೆಡಿಟೇಶನ್ ಸೆಂಟರ್, ಪಾರ್ಟಿ ಹಾಲ್, ಚಿಲ್ಡ್ರನ್ಸ್ ಪ್ಲೇ ಏರಿಯಾ, ವಾಕಿಂಗ್ ಟ್ಯ್ರಾಕ್, ಅತಿಥಿಗಳು ಹಾಗೂ ಮಾಲಕರಿಗೆ ಪ್ರತ್ಯೇಕ ಕಾರು ಪಾರ್ಕಿಂಗ್ ಇದೆ. ಅತ್ಯಾಧುನಿಕ ಸೌಲಭ್ಯದೊಂದಿಗೆ ಪರಿಸರ ಸ್ನೇಹಿ ಯೋಜನೆಯಾಗಿದ್ದು, ಕೈಗೆಟಕುವ ದರದಲ್ಲಿ ಮನೆ ನಿರ್ಮಾಣವಾಗುತ್ತಿದೆ.

ಸಮುಚ್ಚಯದಲ್ಲಿ ನೈಸರ್ಗಿಕ ಬೆಳಕಿನ ಪರಿಕಲ್ಪನೆಗೆ ಆದ್ಯತೆ ನೀಡಲಾಗಿದೆ. ಕಾಲ್ನಡಿಗೆ ದೂರದಲ್ಲಿ ಶಾಲೆ, ದೇವಸ್ಥಾನ, ಚರ್ಚ್, ಮಸೀದಿ, ಬ್ಯಾಂಕ್, ಮಾರುಕಟ್ಟೆ, ಆಸ್ಪತ್ರೆ ಸೌಲಭ್ಯ ಇದೆ. ಕೆಲವೇ ನಿಮಿಷದಲ್ಲಿ ವಿಮಾನ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಕ್ಕೆ ತೆರಳಬಹುದಾಗಿದೆ.

ವಿಶಾಲ ಬಾಲ್ಕನಿ ಸೇರಿದಂತೆ ಎಲ್ಲ ಭಾಗಗಳಲ್ಲಿ ವಿಟ್ರಿಫೈಡ್ ಫ್ಲೋರಿಂಗ್, ನಿರಂತರ ನೀರು ಪೂರೈಕೆಗಾಗಿ ಅಂಡರ್ ಗ್ರೌಂಡ್ ಟ್ಯಾಂಕ್, ವಿಶಾಲ ಕಾರು ನಿಲುಗಡೆ ವ್ಯವಸ್ಥೆ ಇದೆ. ಎರಡು ಬೃಹತ್ ಲಿಫ್ಟ್ ಅಳವಡಿಸಲಾಗಿದೆ.

ಪ್ರೈಮ್ ಲೊಕೇಷನ್

ನಗರದ ಪ್ರಮುಖ ಭಾಗ ಎಂದರೆ ಪ್ರೈಮ್ ಲೊಕೇಷನ್ ಅಥವಾ ಭವಿಷ್ಯದ ಪ್ರೈಮ್ ಲೋಕೇಷನ್ ಆಗಿ ಪರಿವರ್ತನೆಯಾಗಬಲ್ಲ ಪ್ರದೇಶ ಇದಾಗಿದೆ. ಅಭೀಷ್ ಸ್ವ್ಕೇರ್ ಸಮುಚ್ಚಯ ಸುಖವಿಲಾಸ ಸೌಲಭ್ಯವನ್ನು ಹೊಂದಿದ್ದರೂ ಗ್ರಾಹಕರಿಗೆ ಇಲ್ಲಿ ಕೈಗೆಟಕುವ ದರದಲ್ಲಿ ಮನೆಗಳು ಲಭ್ಯವಿದೆ. ಆದ್ದರಿಂದ ಮಧ್ಯಮ ವರ್ಗದ ಸಾಮಾನ್ಯ ಆದಾಯ ಹೊಂದಿದವರು ಕೂಡಾ ಇಲ್ಲಿ ಸುಲಭದಲ್ಲಿ ಮನೆ ಖರೀದಿಸುವ ಅವಕಾಶ ಇದೆ.

ಅಭೀಷ್ ಸಂಸ್ಥೆ

ಸುಂದರ, ಸುದೃಡ, ಗುಣಮಟ್ಟದ ನಿರ್ಮಾಣಕ್ಕೆ ಕರಾವಳಿ ಭಾಗದಲ್ಲಿ ಹೆಸರುವಾಸಿ ಸಂಸ್ಥೆಯಾಗಿ ಅಭೀಷ್ ಬಿಲ್ಡರ್ಸ್ ಮೂಡಿಬಂದಿದೆ. ಆಧುನಿಕ ಶೈಲಿಯ, ಉತ್ತಮ ಗುಣಮಟ್ಟದ ಪರಿಕರ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಕಟ್ಟಡ ವಿನ್ಯಾಸ ಸಹಿತ ಎಲ್ಲಾ ವಿಚಾರಗಳಲ್ಲೂ ಬದ್ಧತೆ ಮತ್ತು ಪಾರದರ್ಶಕತೆಗೆ ಒತ್ತು ನೀಡುವ ಸಂಸ್ಥೆಯಾಗಿದೆ. ನಿರ್ಮಾಣ ಪೂರ್ವದಲ್ಲಿ ಗ್ರಾಹಕರಿಗೆ ನೀಡಿದ ಭರವಸೆಯಂತೆ ಇಡೀ ವಸತಿ ಸಮುಚ್ಚಯ ನಿರ್ಮಾಣ ಮಾಡಿ ಗ್ರಾಹಕರಿಗೆ ಹಸ್ತಾಂತರಿಸಿದ ಸಂಸ್ಥೆಯಾಗಿದೆ. ಇದರಿಂದಾಗಿ ಹೊಸ ಹೊಸ ಗ್ರಾಹಕರು ಖರೀದಿಯೊಂದಿಗೆ ಅಭೀಷ್‍ನ ಈ ಹಿಂದಿನ ಸಂತೃಪ್ತ ಗ್ರಾಹಕರು ಹೂಡಿಕೆಗಾಗಿ ಅದೇ ಸಂಸ್ಥೆಯಲ್ಲಿ ಮತ್ತಷ್ಟು ವಸತಿಗಳನ್ನು ಖರೀದಿ ಮಾಡುತ್ತಿದ್ದಾರೆ. ಕ್ಲಪ್ತ ಸಮಯಕ್ಕೆ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ಮಿಸಿಕೊಟ್ಟು ಗ್ರಾಹಕರಿಗೆ ಯಾವುದೇ ರೀತಿಯ ಆರ್ಥಿಕ ಹೊರೆಯಾಗದಂತೆ ಮನೆಗಳನ್ನು ಹಸ್ತಾಂತರಿಸಿದೆ.

ಕಟ್ಟಡ ವಿನ್ಯಾಸ ಸಹಿತ ಎಲ್ಲಾ ವಿಚಾರಗಳಲ್ಲೂ ಬದ್ಧತೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಸಂಸ್ಥೆಯು ಗುಣಮಟ್ಟದ ನಿರ್ಮಾಣಕ್ಕಾಗಿ ಸಂಸ್ಥೆಗೆ ಕ್ರೆಡಾಯ್ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.

ವಿಶೇಷ ದರ

700 ಚದರ ಅಡಿ 1 ಬಿಎಚ್‍ಕೆ ಫ್ಲ್ಯಾಟ್‍ ದರ 31 ಲಕ್ಷ ರೂ.
755 ಚದರ ಅಡಿ 1 ಬಿಎಚ್‍ಕೆ ಫ್ಲ್ಯಾಟ್‍ದರ 33 ಲಕ್ಷ ರೂ.
1005 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 43 ಲಕ್ಷ ರೂ.
1035 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 44.5 ಲಕ್ಷ ರೂ.
1060 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 45.5 ಲಕ್ಷ ರೂ.
1100 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 47 ಲಕ್ಷ ರೂ.
1115 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 48 ಲಕ್ಷ ರೂ.
1160 ಚದರ ಅಡಿ 2 ಬಿಎಚ್‍ಕೆ ಫ್ಲ್ಯಾಟ್‍ದರ 49.5 ಲಕ್ಷ ರೂ.
(ಎಲ್ಲವೂ ಸ್ಪೆಷಲ್ ಲಾಂಚಿಂಗ್ ಡಿಸ್ಕೌಂಟ್ ದರವಾಗಿದ್ದು, ಸೀಮಿತ ಅವಧಿ ವರೆಗೆ ಲಭ್ಯ)

ಅಭೀಷ್ ಸೆಂಟರ್ ನಲ್ಲಿ ವಾಣಿಜ್ಯ ಮಳಿಗೆ ಲಭ್ಯ

ಉತ್ಕೃಷ್ಟ ಗುಣಮಟ್ಟ ಮತ್ತು ಅತ್ಯುತ್ತಮ ಸೌಲಭ್ಯಗಳೊಂದಿಗೆ ಸುರತ್ಕಲ್‍ನಲ್ಲಿ ನಿರ್ಮಾಣವಾಗಿರುವ  ಅಭೀಷ್ ಬಿಸಿನೆಸ್ ಸೆಂಟರ್‍ನಲ್ಲಿ ವಾಣಿಜ್ಯ ಮಳಿಗೆ ಕಾಮಗಾರಿ ಪೂರ್ಣಗೊಂಡಿದೆ. ಸುರತ್ಕಲ್ ಬಸ್ ನಿಲ್ದಾಣದ ಸನಿಹದಲ್ಲೇ, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಈ ವಾಣಿಜ್ಯ ಸಮುಚ್ಚಯ ನಿರ್ಮಾಣವಾಗಿದ್ದು,  500 ಚದರ ಅಡಿಯಿಂದ ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ನಾನಾ ವಿಸ್ತೀರ್ಣದ ವಾಣಿಜ್ಯ ಮಳಿಗೆ ಲಭ್ಯ ವಿದೆ. ವಾಣಿಜ್ಯ ಸಮುಚ್ಚಯ ಪೂರ್ಣಗೊಂಡಿದ್ದು, ವಾಸ್ತವ್ಯ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಹೈಪರ್ ಮಾರ್ಕೆಟ್, ಕಂಪನಿಗಳ ಕಾರ್ಪೊರೇಟ್ ಕಚೇರಿಗಳು, ಬಹುರಾಷ್ಟ್ರೀಯ ಕಂಪನಿಗಳ ಮಳಿಗೆಗಳು, ಸೂಪರ್ ಮಾರ್ಕೆಟ್, ಗೇಮಿಂಗ್ ಸೆಂಟರ್, ಶೋರೂಂಗಳು, ಪೊಲಿಕ್ಲಿನಿಕ್ ಸೆಂಟರ್, ವೈದ್ಯರಿಗೆ ಕ್ಲಿನಿಕ್, ಎಂಜಿನಿಯರ್ಸ್, ವಕೀಲರಿಗೆ ಕಚೇರಿ ಮತ್ತು ಫುಡ್‍ಕೋರ್ಟ್‍ಗಳಿಗೆ ಪೂರಕವಾಗಿವೆ. ಇಲ್ಲಿ ಕೂಡಾ ಗ್ರಾಹಕರಿಗೆ ಕಂತಿನ ರೂಪದಲ್ಲಿ ಮಳಿಗೆಗಳನ್ನು ಮಾರಾಟ ಮಾಡಲಾಗುವುದು. ಆಸಕ್ತರು ಸಂಸ್ಥೆಗೆ ಭೇಟಿ ನೀಡಬಹುದಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News