ಹರ್ಯಾಣ: 2 ವಾರಗಳಲ್ಲಿ 174 ವಿದ್ಯಾರ್ಥಿಗಳಿಗೆ ಕೊರೋನ ಸೋಂಕು ; ಶಾಲೆ ಮತ್ತೆ ಬಂದ್

Update: 2020-11-20 15:20 GMT

ಚಂಡೀಗಢ, ನ.20: ಹರ್ಯಾಣದಲ್ಲಿ ನವೆಂಬರ್ 2ರಿಂದ ಶಾಲೆಗಳು ಪುನರಾರಂಭಗೊಂಡಿದ್ದವು. ಆದರೆ 2 ವಾರಗಳಲ್ಲಿ 174 ವಿದ್ಯಾರ್ಥಿಗಳು ಹಾಗೂ 107 ಶಿಕ್ಷಕರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನವೆಂಬರ್ 30ರವರೆಗೆ ಶಾಲೆಗಳನ್ನು ಮುಚ್ಚುವಂತೆ ಸರಕಾರ ಶುಕ್ರವಾರ ಆದೇಶಿಸಿದೆ. ಹರ್ಯಾಣದಲ್ಲಿ 9ರಿಂದ 12ನೇ ತರಗತಿಗಳು ನವೆಂಬರ್ 2ರಿಂದ ಆರಂಭವಾಗಿದ್ದು ಒಟ್ಟು 6 ಲಕ್ಷ ವಿದ್ಯಾರ್ಥಿಗಳಲ್ಲಿ 1.58 ಲಕ್ಷ ವಿದ್ಯಾರ್ಥಿಗಳು ದಿನಾ ಶಾಲೆಗೆ ಆಗಮಿಸುತ್ತಿದ್ದರು. ಇವರಲ್ಲಿ 174 ವಿದ್ಯಾರ್ಥಿಗಳ ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಸೋಂಕಿತರು ರಾಜ್ಯದ 3 ಜಿಲ್ಲೆಗಳ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಎಂದು ಮೂಲಗಳು ಹೇಳಿವೆ. ಶುಕ್ರವಾರ ಬೆಳಗ್ಗಿನವರೆಗಿನ ಅಂಕಿಅಂಶದಂತೆ ದೇಶದಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ 90 ಲಕ್ಷದ ಗಡಿ ದಾಟಿದ್ದು, 1,32,162 ಜನ ಮೃತಪಟ್ಟಿದ್ದಾರೆ. ಹರ್ಯಾಣದಲ್ಲಿ ಗುರುವಾರ 2,212 ಹೊಸ ಪ್ರಕರಣ ದಾಖಲಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ 2,09,251ಕ್ಕೇರಿದೆ. 2,113 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News