ಕೊರೋನ ಪಾಸಿಟಿವ್ ಪ್ರಕರಣಗಳ ಏರಿಕೆ : ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ತಂಡ ಕಳುಹಿಸಲು ಕೇಂದ್ರ ಚಿಂತನೆ

Update: 2020-11-20 15:48 GMT

ಹೊಸದಿಲ್ಲಿ, ನ. 20: ಕೊರೋನ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉನ್ನತ ಮಟ್ಟದ ಬಹು ಶಿಸ್ತೀಯ ತಂಡಗಳನ್ನು ಕಳುಹಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

 ಕೊರೋನ ಪಾಸಿಟಿವ್ ಪ್ರಕರಣಗಳ ಪರಿಣಾಮಕಾರಿ ವೈದ್ಯಕೀಯ ನಿರ್ವಹಣೆ, ಪರೀಕ್ಷೆ, ನಿಗಾ, ಕಂಟೈನ್ಮೆಂಟ್ ಅನ್ನು ಸಶಕ್ತೀಕರಣಗೊಳಿಸುವಲ್ಲಿ ಹರ್ಯಾಣ, ರಾಜಸ್ಥಾನ, ಗುಜರಾತ್ ಹಾಗೂ ಮಣಿಪುರ ಜಿಲ್ಲೆಗಳ ಶ್ರಮಕ್ಕೆ ಬೆಂಬಲ ನೀಡಲು ಉನ್ನತ ಮಟ್ಟದ ತಂಡಗಳನ್ನು ಕೇಂದ್ರ ಸರಕಾರ ಗುರುವಾರ ಕಳುಹಿಸಿ ಕೊಟ್ಟಿದೆ. ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಹ ತಂಡಗಳನ್ನು ಕಳುಹಿಸಲು ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ತಪ್ಪಿ ಹೋದ ಹಾಗೂ ಪತ್ತೆಯಾಗದ ಕೊರೋನ ಪಾಸಿಟಿವ್ ಪ್ರಕರಣಗಳನ್ನು ಸಮಯೋಚಿತ ಹಾಗೂ ಪರಿಣಾಮಕಾರಿ ಪತ್ತೆ, ಕಂಟೈನ್‌ಮೆಂಟ್ ರಚನೆ, ತರುವಾಯ ಚಿಕಿತ್ಸೆಯ ಖಾತರಿ ನೀಡಲು ತೀವ್ರಗತಿಯ ಹಾಗೂ ವ್ಯಾಪಕ ಪರೀಕ್ಷೆಗಳನ್ನು ನಡೆಸುವಂತೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News