ನ.21ರಂದು ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಬೇತಿ ಶಿಬಿರ
ಮಂಗಳೂರು, ನ.20: ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ನ.21ರಂದು ಬೆಳಗ್ಗೆ 10 ಗಂಟೆಗೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
‘ಟೀಮ್ ಎಜು ಯೆನೆಪೊಯ ಗ್ರೂಪ್’ನೊಂದಿಗೆ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದ್ದು, ಶೈಕ್ಷಣಿಕ ಕಾರ್ಯಕ್ರಮಗಳು, ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಈಗಾಗಲೇ ಮೂರು ತರಬೇತಿ ಶಿಬಿರಗಳು ಆಯೋಜನೆಗೊಂಡು ಯಶಸ್ಸು ಕಂಡಿವೆ. ಈಗ ನಾಲ್ಕನೆಯ ತರಬೇತಿ ಶಿಬಿರ ನಡೆಯಲಿದೆ.
‘ಟೀಮ್ ಎಜು ಯೆನೆಪೊಯ ಗ್ರೂಪ್’ನ ನಿರ್ದೇಶಕಿ ಮಿಸ್ರಿಯಾ ಜಾವೇದ್ ಶಿಬಿರದ ನೇತೃತ್ವ ವಹಿಸಲಿದ್ದಾರೆ. ಇವರೊಡನೆ ಸಿನಾನ್ ಝಕರಿಯ್ಯಾ, ಮೊಹಸಿನ್, ಸುಶೀಲ್ ತರಬೇತಿ ಶಿಬಿರ ನಡೆಸಿಕೊಡಲಿದ್ದಾರೆ.
ಅಧಿಕೃತವಾಗಿ ಶಾಲೆ ಆರಂಭವಾಗುವವರೆಗೆ, ನ.23ರಿಂದ 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್‌ಗಳು ನಡೆಯಲಿವೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಿಇಟಿ, ನೀಟ್, ಐಎಎಸ್, ಐಪಿಎಸ್ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 8ನೇ ತರಗತಿಯಿಂದಲೇ ತಯಾರಿ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದು ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವೈ.ಮುಹಮ್ಮದ್ ಬ್ಯಾರಿ, ಮುಖ್ಯೋಪಾಧ್ಯಾಯಿನಿ ನಂದಾ ಉಮಾಪ್ರಿಯ ಗಡಿಯಾರ್, ಮ್ಯಾನೇಜರ್ ಫ್ಲೊಸಿ ತಾವ್ರೊ, ಸಹಾಯಕ ಮುಖೋಪಾಧ್ಯಾಯರಾದ ಫೆಲಿಕ್ಸ್, ಸುಮತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.