ಸರಕಾರಿ ವಸತಿ ಖಾಲಿ ಮಾಡುವಂತೆ 20ಕ್ಕೂ ಅಧಿಕ ಕಲಾವಿದರಿಗೆ ನೋಟಿಸ್

Update: 2020-11-20 17:58 GMT

ಹೊಸದಿಲ್ಲಿ, ನ. 20: ದಿಲ್ಲಿಯ ವಿವಿಧ ಭಾಗದಲ್ಲಿರುವ ಸರಕಾರಿ ವಸತಿಗಳನ್ನು ಖಾಲಿ ಮಾಡುವಂತೆ ದೇಶದ 20ಕ್ಕೂ ಅಧಿಕ ಶ್ರೇಷ್ಠ ಕಲಾವಿದರಿಗೆ ಕೇಂದ್ರ ಸರಕಾರ ನೋಟಿಸು ಜಾರಿ ಮಾಡಿದೆ.

 ಸರಕಾರಿ ವಸತಿ ಖಾಲಿ ಮಾಡುವಂತೆ ಕಥಕ್ ನಿರೂಪಕ ಪಂಡಿತ್ ಬಿರ್ಜು ಮಹಾರಾಜ್, ದ್ರುಪಾದ್ ಗಾಯಕ ಯು.ಟಿ. ವಾಸಿಫುದ್ದೀನ್ ದಾಗರ್, ಅಪ್ರತಿಮ ಮೋಹನಿಯಾಟ್ಟಂ ಕಲಾವಿದೆ ಭಾರತಿ ಶಿವಾಜಿ, ಕಥಕ್ ಗುರು ಗೀತಾಂಜಲಿ ಲಾಲ್, ಕೂಚಿಪುಡಿ ಕಲಾವಿದ ಗುರು ಜಯರಾಮ್ ರಾವ್, ಚಿತ್ರ ಕಲಾವಿದ ಹಾಗೂ ಶಿಲ್ಪ ಕಲಾವಿದ ಜತಿನ್ ದಾಸ್ ಸೇರಿದಂತೆ 20ಕ್ಕೂ ಅಧಿಕ ಕಲಾವಿದರಿಗೆ ಸೂಚಿಸಲಾಗಿದೆ.

ಈ ನಡೆಯನ್ನು ದೃಢಪಡಿಸಿರುವ ಕೇಂದ್ರ ಸಾಂಸ್ಕೃತಿಕ ಸಚಿವ ಪ್ರಹ್ಲಾದ್ ಪಟೇಲ್, ವಸತಿ ಖಾಲಿ ಮಾಡಲು ಕಲಾವಿದರಿಗೆ 2020 ಡಿಸೆಂಬರ್ 31ರ ವರೆಗೆ ಕಾಲಾವಕಾಶ ನೀಡಲಾಗಿದೆ. ವಿಫಲರಾದರೆ, ಅವರು ಬಾಕಿ ಮೊತ್ತ ಪಾವತಿಸಬೇಕು. ಗಡುವಿನ ಒಳಗೆ ಅವರು ವಸತಿ ಖಾಲಿ ಮಾಡಿದರೆ, ಅವರ ಬಾಕಿಯನ್ನು ಮನ್ನಾ ಮಾಡಲಾಗುವುದು ಎಂದರು. 1970ರಿಂದ 40ರಿಂದ 70 ವರ್ಷ ವಯಸ್ಸಿನ ಕಲಾವಿದರಿಗೆ (ಇವರಲ್ಲಿ ಹೆಚ್ಚಿನವರು ಪದ್ಮ ಹಾಗೂ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)ಕಡಿಮೆ ಬಾಡಿಗೆಗೆ ಸರಕಾರಿ ಮನೆಗಳನ್ನು 3 ವರ್ಷಗಳ ಅವಧಿಗೆ ಮಂಜೂರು ಮಾಡಲಾಗುತ್ತಿತ್ತು. ಅನಂತರ ಅದರ ಅವಧಿಯನ್ನು ನಿರಂತರ ವಿಸ್ತರಿಸಲಾಗುತ್ತಿತ್ತು. ಈ ವಿಸ್ತರಣೆಯ ಅವಧಿ 2014ಕ್ಕೆ ಅಂತ್ಯಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News