ಅಡ್ಯಾರ್ ಅರ್ಕುಳ ಗ್ರಾಪಂ ಚುನಾವಣೆ : ಎಸ್ ಡಿಪಿಐಯಿಂದ ಮೊದಲ ಹಂತದ ಅಭ್ಯರ್ಥಿಗಳ ಘೋಷಣೆ

Update: 2020-11-21 04:48 GMT

ವಳಚ್ಚಿಲ್, ನ.21: ಅಡ್ಯಾರ್ ಅರ್ಕುಳ ಗ್ರಾಮ ಪಂಚಾಯತ್ ಚುಣಾವಣೆಗೆ ಎಸ್.ಡಿ.ಪಿ.ಐ. ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಘೋಷಣಾ ಕಾರ್ಯಕ್ರಮ ಶುಕ್ರವಾರ ವಳಚ್ಚಿಲ್ ನಲ್ಲಿ ನಡೆಯಿತು.

ಎಸ್.ಡಿ.ಪಿ.ಐ. ಅಡ್ಯಾರ್ ಅರ್ಕುಳ ಗ್ರಾಮ ಸಮಿತಿಯ ಅಧ್ಯಕ್ಷ ಯಾಸೀನ್ ಅರ್ಕುಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ. ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಮೊದಲ ಹಂತದಲ್ಲಿ ಹದಿನೈದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್.ಡಿ.ಪಿ.ಐ. ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಪ್ರಸಕ್ತ ಸನ್ನಿವೇಶದ ರಾಜಕೀಯ ಅಧಿಕಾರದ ದುರ್ಬಳಕೆ ಮತ್ತು ಎಸ್.ಡಿ.ಪಿ.ಐ.ಯ ರಾಜಕೀಯ ಕಾರ್ಯತಂತ್ರ ಹಾಗೂ ಅಗತ್ಯತೆಗಳ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ  ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಹಾಗೂ ಎಸ್.ಡಿ.ಪಿ.ಐ. ಅಡ್ಯಾರ್ ಅರ್ಕುಳ ಗ್ರಾಮದ ಚುನಾವಣಾ ಉಸ್ತುವಾರಿ ಮುನೀಬ್ ಬೆಂಗರೆ, ಎಸ್.ಡಿ.ಪಿ.ಐ. ಜಿಲ್ಲಾ ಕೋಶಾಧಿಕಾರಿ ನೂರುಲ್ಲಾ ಕುಳಾಯಿ, ಜಿಲ್ಲಾ ಸಮಿತಿಯ ಸದಸ್ಯ ಲ್ಯಾನ್ಸಿ ಥೋರಸ್,  ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ನೌಶಾದ್ ಚೊಕ್ಕಬೆಟ್ಟು, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಫರಂಗಿಪೇಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ.  ಅಡ್ಯಾರ್ ಅರ್ಕುಳ ಗ್ರಾಮ ಸಮಿತಿಯ ಕಾರ್ಯದರ್ಶಿ ರಮೀಝ್ ಅರ್ಕುಳ ಸ್ವಾಗತಿಸಿದರು. ಎಸ್.ಡಿ.ಟಿ.ಯು. ಜಿಲ್ಲಾಧ್ಯಕ್ಷ ಖಾದರ್ ಅಮ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News