ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಐಎಎಸ್ ಟಾಪರ್‌ಗಳಾದ ಟೀನಾ ದಾಬಿ, ಅಥರ್ ಖಾನ್

Update: 2020-11-21 09:14 GMT

ಹೊಸದಿಲ್ಲಿ: ಯುಪಿಎಸ್‌ಸಿ ಪರೀಕ್ಷೆಯ 2015ರ ಬ್ಯಾಚ್‌ನ ಟಾಪರ್‌ಗಳಾದ ಟೀನಾ ದಾಬಿ ಹಾಗೂ ಅವರ ಪತಿ, ಐಎಎಸ್ ಅಧಿಕಾರಿ ಅಥರ್ ಖಾನ್ ಅವರು ಜೈಪುರದ ಕುಟುಂಬ ನ್ಯಾಯಾಲಯಕ್ಕೆ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು  India Today ವರದಿ ಮಾಡಿದೆ.

ಕಾಶ್ಮೀರ ಮೂಲದ ಅಥರ್ ಖಾನ್ 2015ರಲ್ಲಿ ನಾಗರಿಕ ಸೇವ ಪರೀಕ್ಷೆ ಯುಪಿಎಸ್‌ಸಿ ಯಲ್ಲಿ ಎರಡನೇ ಸ್ಥಾನ ಪಡೆದಿದ್ದರೆ, ಟೀನಾ ಬಾಬಿ ಇದೇ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದರು. 2018ರಲ್ಲಿ ಇವರಿಬ್ಬರು ವಿವಾಹವಾಗಿದ್ದರು.

ಟೀನಾ ಹಾಗೂ ಅಥರ್ ತರಬೇತಿ ಅವಧಿಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ರಾಜಸ್ಥಾನದ ಕೇಡರ್‌ನ ಅಧಿಕಾರಿಯಾಗಿರುವ ಇಬ್ಬರು ಪ್ರಸ್ತುತ ಜೈಪುರದಲ್ಲಿ ಕರ್ತವ್ಯದಲ್ಲಿದ್ದಾರೆ.

ಟೀನಾ ಹಾಗೂ ಅಥರ್ ಖಾನ್ ವಿವಾಹವು ಭಾರೀ ಸುದ್ದಿಯಾಗಿತ್ತು. ಇವರಿಬ್ಬರ ವಿವಾಹಕ್ಕೆ ಪ್ರಶಂಸೆ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ವಿವಾಹ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆಗಿನ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News