ಶಿರೋಮಣಿ ಅಕಾಲಿದಳ ಮುಖಂಡನಿಗೆ ನೀಡಿದ್ದ ಝೆಡ್ ಪ್ಲಸ್ ಭದ್ರತೆ ಹಿಂಪಡೆದ ಕೇಂದ್ರ ಸರಕಾರ

Update: 2020-11-21 07:10 GMT

ಹೊಸದಿಲ್ಲಿ: ಶಿರೋಮಣಿ ಅಕಾಲಿದಳ(ಎಸ್‌ಎಡಿ) ಕೃಷಿ ಮಸೂದೆಗಳಿಗೆ ಸಂಬಂಧಿಸಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರ ಬಂದ ಹಲವು ವಾರಗಳ ಬಳಿಕ ಕೇಂದ್ರ ಸರಕಾರವು ಮಾಜಿ ಸಚಿವ ಹಾಗೂ ಪಕ್ಷದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾಗೆ ನೀಡಿರುವ ಝೆಡ್-ಪ್ಲಸ್ ಭದ್ರತೆಯನ್ನು ಹಿಂಪಡೆದಿದೆ.

 ಬಿಕ್ರಮ್ ಸಿಂಗ್‌ರಿಗೆ ನೀಡಿದ್ದ ಝೆಡ್ ಪ್ಲಸ್ ಭದ್ರತೆಯನ್ನು ಹಿಂದಕ್ಕೆ ಪಡೆದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿರುವ ಅಕಾಲಿದಳ, ಇದು ಸರ್ವಾಧಿಕಾರಿ ಹಾಗೂ ರಾಜಕೀಯ ಪ್ರೇರಿತ ಹೆಜ್ಜೆಯಾಗಿದೆ. ನಮ್ಮ ಪಕ್ಷವು ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ಖಂಡಿಸಿ ರೈತರ ಪರ ಗಟ್ಟಿಯಾಗಿ ನಿಂತಿರುವುದಕ್ಕೆ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದೆ.

ಕೇಂದ್ರ ಸರಕಾರವು ಭದ್ರತೆಯನ್ನು ಹಿಂಪಡೆದಿರುವ ಕಾರಣ ಮಜಿಥಿಯಾಗೆ ಭದ್ರತೆ ಒದಗಿಸುವ ಜವಾಬ್ದಾರಿ ಪಂಜಾಬ್ ಪೊಲೀಸರ ಮೇಲೆ ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News