​ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಎಐವೈಎಫ್ ಮನವಿ

Update: 2020-11-21 13:11 GMT

ಮಂಗಳೂರು, ನ.21:ರಾಜ್ಯ ಸರಕಾರ ಧರ್ಮ, ಜಾತಿ, ಪ್ರದೇಶಗಳ ಆಧಾರದಲ್ಲಿ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸುವ ಬದಲು ಯುವಜನರ ಸಬಲೀಕರಣಕ್ಕೆ ಯುವಜನ ನಿಗಮ ಸ್ಥಾಪಿಸಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್, ಮಂಗಳೂರು ತಾಲೂಕು ಸಮಿತಿ (ಎಐವೈಎಫ್) ಮನವಿ ಮಾಡಿದೆ.

ಜಾತಿ, ಧರ್ಮಗಳ ನಿಗಮದಿಂದ ಸಮಾಜದ ಮೇಲ್ವರ್ಗದ ಕೆಲವರಿಗೆ ಮಾತ್ರ ಉಪಯೋಗವಾಗುತ್ತಿದೆ. ಮಧ್ಯಮ ಮತ್ತು ಕೆಳ ವರ್ಗದ ಯುವಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. 2013ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ‘ಸ್ವಾಮಿ ವಿವೇಕಾನಂದ ಯುವಜನ ಸಬಲೀಕರಣ ನಿಗಮ’ವನ್ನು ಸ್ಥಾಪಿಸಲು ಮಂತ್ರಿಮಂಡಲ ಒಪ್ಪಿಗೆ ನೀಡಿತ್ತು. ನಂತರ ಅದು ಕಾರ್ಯರೂಪಕ್ಕೆ ಬರಲಿಲ್ಲ. ರಾಜ್ಯದಲ್ಲಿ ಸುಮಾರು 1.80 ಕೋಟಿ ಯುವಜನರಿದ್ದಾರೆ. ಅವರೆಲ್ಲಾ ಸಬಲೀಕರಣಗೊಂಡರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಸಮಿತಿಯ ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್, ಜೊತೆ ಕಾರ್ಯದರ್ಶಿ ಕೃಷ್ಣಪ್ಪಪಿಲಿಲುಳ, ಕೋಶಾಧಿಕಾರಿ ರಘು ಮಾಲೆಮಾರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News