ಕಾರ್ಕಳ: ಕಾಡುಹೊಳೆಯಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ರಕ್ಷಣೆ

Update: 2020-11-21 14:29 GMT

ಕಾರ್ಕಳ, ನ.21: ಕಾರ್ಕಳ ತಾಲೂಕಿನ ಕಾಡುಹೊಳೆ ಎಂಬಲ್ಲಿ ಜನವಸತಿ ಪ್ರದೇಶದಲ್ಲಿ ಕಂಡುಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಆಗುಂಬೆ ರೈನ್ ಫಾರೆಸ್ಚ್ ರಿಸರ್ಚ್ ಸ್ಟೇಶನ್‌ನ ಕ್ಷೇತ್ರೀಯ ನಿರ್ದೇಶಕ ಅಜಯ್‌ಗಿರಿ ನೇತೃತ್ವದ ತಂಡ ರಕ್ಷಿಸಿದೆ.

ಮನೆಯೊಂದರ ಕಂಪೌಂಡ್‌ನಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ಸ್ಥಳೀಯರು ಭೀತಿಯಿಂದ ಓಡಿಸಿದಾಗ, ಅದು ಅಲ್ಲೇ ಸಮೀಪದ ಮರವನ್ನು ಏರಿತು. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಜಯ್‌ಗಿರಿ, ಮಣಿ ಕಂಠ, ಮೇಘನಾ ನಾಗರಾಜ್, ಕಾಳಿಂಗ ಸರ್ಪವನ್ನು ರಕ್ಷಿಸಿ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ಇದೇ ಸಂದರ್ಭದಲ್ಲಿ ಕಾಳಿಂಗ ಸರ್ಪದ ಬಗ್ಗೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಅಜಯ್‌ಗಿರಿ ನಡೆಸಿದರು. ಈ ಹಾವು ಸುಮಾರು 12.50 ಅಡಿ ಉದ್ದ ಹಾಗೂ 10ಕೆ.ಜಿ. ತೂಕ ಇತ್ತು ಎಂದು ಅಜಯ್‌ಗಿರಿ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News