ನ.23: ಸಿಟಿ ಗೋಲ್ಡ್‌ನಿಂದ ‘ಮೆಗಾ ಮಂಗಳೂರು ಫೀಸ್ಟ್’ ಆರಂಭ

Update: 2020-11-21 17:06 GMT

ಮಂಗಳೂರು, ನ.21: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ನ.23ರಂದು ಮಧ್ಯಾಹ್ನ 3:30ಕ್ಕೆ ‘ಮೆಗಾ ಮಂಗಳೂರು ಫೀಸ್ಟ್’ ಆರಂಭಗೊಳ್ಳಲಿದೆ. ಡಿಸೆಂಬರ್‌ವರೆಗೂ ಈ ಫೀಸ್ಟ್ ಮುಂದುವರಿಯಲಿದೆ.

‘ವಾಚೆಸ್’ನ್ನು ಮಾಜಿ ಶಾಸಕ ಡಾ.ಬಿ.ಎ. ಮೊಯ್ದೀನ್ ಬಾವ ಉದ್ಘಾಟಿಸಲಿದ್ದಾರೆ. ‘ಪಿಎಫ್‌ಎ' ಸ್ಕೀಮ್‌ನ್ನು ವಿಶ್ವಾಸ್ ಬಾವ ಬಿಲ್ಡರ್ಸ್‌ನ ಚೇರ್‌ಮನ್ ಅಬ್ದುಲ್ ರವೂಫ್ ಪುತ್ತಿಗೆ, ‘ಕೆನ್ನಾ ಡೈಮಂಡ್ಸ್’ನ್ನು ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಾಂತಿ ರೊಚೆ, ಇಟಾಲಿಯನ್ ಕಲೆಕ್ಷನ್ಸ್’ನ್ನು ಬಂಟ್ವಾಳ ನಗರಸಭೆ ಕೌನ್ಸಿಲರ್ ಝೀನತ್ ಅಬ್ದುಲ್ ಖಾದರ್, ‘ಕಿಡ್ಸ್ ಕಲೆಕ್ಷನ್ಸ್’ನ್ನು ಮನಪಾದ ಕದ್ರಿಯ ಕಾರ್ಪೊರೇಟರ್ ಕಾವ್ಯ ನಟರಾಜ್ ಆಳ್ವ, ‘ಆ್ಯಂಟಿಕ್ಯೂ’ನ್ನು ಸಹನಾ ವುಮೆನ್ಸ್ ಕೌನ್ಸೆಲಿಂಗ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಖೈರುನ್ನಿಸಾ ಸೈಯದ್ ಉದ್ಘಾಟಿಸಲಿದ್ದಾರೆ.

ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮೈಮುನಾ ಫೌಂಡೇಶನ್‌ನ ಚೇರ್‌ಮನ್ ಆಸಿಫ್ ಆಪದ್ಬಾಂಧವ ಅವರನ್ನು ಸಿಟಿ ಗೋಲ್ಡ್ ಸಂಸ್ಥೆಯಿಂದ ಸನ್ಮಾನಿಸಿ, ಗೌರವಿಸಲಾಗುವುದು.

ಬಂಪರ್ ಬಹುಮಾನ: ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾಗುತ್ತಿದೆ. ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್‌ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ಪ್ರತೀ ಖರೀದಿಯ ಮೇಲೆ ಕೂಪನ್ ವಿತರಿಸುತ್ತಿದ್ದು, ವಿಜೇತ ಗ್ರಾಹಕರಿಗೆ ಡೈಮಂಡ್ ರಿಂಗ್‌ನ್ನು ಉಚಿತವಾಗಿ ನೀಡಲಾಗುವುದು. ಪ್ರತೀ ಎರಡು ಲಕ್ಷ ರೂ. ಖರೀದಿಯ ಮೇಲೆ ಒಂದು ವೋಚರ್‌ನ್ನು ಉಚಿತವಾಗಿ ನೀಡಲಾಗುವುದು. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗುತ್ತಿದೆ.

ಮೇಕಿಂಗ್ ಚಾರ್ಜೆಸ್ ಕಡಿತ: ಪ್ರತಿ ಚಿನ್ನದ ಖರೀದಿಯ ವೆಚ್ಚದ ಮೇಲೆ ಶೇ.55, ವಜ್ರ ಖರೀದಿಯ ಮೇಲೆ ಶೇ.25, ಅನ್‌ಕಟ್ ವಜ್ರದ ಖರೀದಿ ಮೇಲೆ ಶೇ.25 ರಷ್ಟು ಕಡಿತದ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಅತ್ಯಮೂಲ್ಯ ಹಾರಗಳಿಗೆ (ನೆಕ್ಲೇಸ್) ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News