ಎಚ್ಚರ ...‌ ಗಿಫ್ಟ್ ಆಸೆಗೆ ಮರುಳಾಗಿ ಲಕ್ಷಾಂತರ ರೂ. ಕಳೆದುಕೊಳ್ಳಬೇಡಿ!

Update: 2020-11-21 17:30 GMT

ಮಂಗಳೂರು, ನ.21: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯೋರ್ವ ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಲಕ್ಷಾಂತರ ರೂ.ನ್ನು ವಿವಿಧ ಖಾತೆಗಳಿಗೆ ಜಮಾ ಮಾಡಿಸಿ ಮೋಸ ಮಾಡಿರುವ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.5ರಂದು ಫೇಸ್‌ಬುಕ್‌ನಲ್ಲಿ ‘ರಿಯನಾರ್ಡೊ ನೆಯಿಲ್’ ಎಂಬ ವ್ಯಕ್ತಿಯ ‘ಫ್ರೆಂಡ್ ರಿಕ್ವೆಸ್ಟ್’ ಬಂದಿದ್ದು, ನಂತರ ಮೊಬೈಲ್ ನಂಬರ್ ಪಡೆದು ಆಗಾಗ ಇಂಟರ್‌ನೆಟ್ ಕರೆ ಮಾಡಿದ್ದಾನೆ. ನಂತರ ಗಿಫ್ಟ್ ಕಳುಹಿಸಿ ಕೊಡುವುದಾಗಿ ಹೇಳಿದಾಗ ಸಂತ್ರಸ್ತ ನಿರಾಕರಿಸಿದ್ದಾರೆ. ಆದರೂ ಗಿಫ್ಟ್ ಕಳುಹಿಸಿದ್ದು, ಆ.25ರಂದು ಮಹಿಳೆಯೊಬ್ಬರು ಕೊರಿಯರ್ ಕಚೇರಿಯಿಂದ ಮಾತನಾಡುವುದಾಗಿ ಹೇಳಿ ಪಾರ್ಸೆಲ್ ಖರ್ಚು 32,800 ರೂ. ಪಾವತಿಸುವಂತೆ ಹೇಳಿದ್ದಾರೆ. ಆ ಬಳಿಕ ಇನ್ನೋರ್ವ ಮಹಿಳೆ ಕರೆ ಮಾಡಿ ನವದೆಹಲಿಯಿಂದ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಗಿಫ್ಟ್‌ನ ಕಸ್ಟಮ್ಸ್ ವೆಚ್ಚ, ಅಕೌಂಟ್ ಅಪ್‌ಡೇಟ್, ಜಿಎಸ್‌ಟಿ ಇತ್ಯಾದಿ ಖರ್ಚು ನೀಡಬೇಕೆಂದು ವಿವಿಧ ದಿನಾಂಕದಂದು ವಿವಿಧ ಖಾತೆಗಳಿಗೆ ಒಟ್ಟು 14,91,840 ರೂ. ಜಮಾ ಮಾಡಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News