ಬಿಹಾರ ಮೂಲದ ವ್ಯಕ್ತಿಯ ಮೊಬೈಲ್ ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2020-11-21 17:19 GMT

ಮಂಗಳೂರು, ನ.21: ನಗರದ ಪಣಂಬೂರು ಸಮೀಪದ ಪೆಟ್ರೋಲ್ ಬಂಕ್‌ವೊಂದರ ಬಳಿ ಬಿಹಾರ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.ಕೆಂಜಾರು ಪೊರ್ಕೋಡಿ ನಿವಾಸಿ ಜಾವೇದ್ ಅಖ್ತಾರ್ (23), ಕಸಬಾ ಬೆಂಗರೆ ನಿವಾಸಿ ತೋಯಿದ್ ಖಾದರ್ (18) ಬಂಧಿತ ಆರೋಪಿಗಳು.

ನ.16ರಂದು ಸಂಜೆ 7:15ಕ್ಕೆ ಬಿಹಾರ ಮೂಲದ ಗೋವಿಂದ್ ಕುಮಾರ್ ಅವರು ಪಣಂಬೂರು ಸಮೀಪದ ಪೆಟ್ರೋಲ್ ಬಂಕ್‌ವೊಂದರ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಗೋವಿಂದ್ ಅವರಿಗೆ ಹಲ್ಲೆ ನಡೆಸಿ, 5ಸಾವಿರ ರೂ. ಬೆಲೆಬಾಳುವ ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪಣಂಬೂರು ಇನ್‌ಸ್ಪೆಕ್ಟರ್ ಅಝಮಲಿ ಅಲಿ ನೇತೃತ್ವದ ತಂಡ ತನಿಖೆ ನಡೆಸಿ ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಆರೋಪಿಗಳನ್ನು ಪತ್ತೆ ಹಚ್ಚಿ, ಆರೋಪಿಗಳಿಂದ ಮೊಬೈಲ್, ಕೃತ್ಯಕ್ಕೆ ಬಳಸಿ ಎರಡು ಸ್ಕೂಟರ್‌ಗಳನ್ನು ಸ್ವಾಧೀನಪಡಿಸಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಡಿಸಿಪಿಗಳಾದ ಅರುಣಾಂಶುಗಿರಿ, ವಿನಯ್ ಗಾಂವ್ಕರ್ ಮತ್ತು ಎಸಿಪಿ ಬೆಳ್ಳಿಯಪ್ಪ ಕೆ.ಯು. ಅವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಣಂಬೂರು ಇನ್‌ಸ್ಪೆಕ್ಟರ್ ಅಝಮತ್ ಅಲಿ, ಎಸ್‌ಐ ಉಮೇಶ್ ಕುಮಾರ್, ಎಎಸ್‌ಐಗಳಾದ ಈಶ್ವರ ಸ್ವಾಮಿ, ಕೃಷ್ಣ, ಸಿಬ್ಬಂದಿ ಡೇವಿಡ್ ಡಿಸೋಜ, ಕಮಲಾಕ್ಷ, ಪ್ರಮೋದ್, ಭರತ್ ಕುಮಾರ್, ದಾದಾಸಾಬ್, ಸಿದ್ದರಾಜ, ಮಂಜುನಾಥ್ ಉಪನಾಳ ಪಾಲ್ಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News