ಉಡುಪಿ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ವಿಶ್ವರೂಪ ದರ್ಶನ

Update: 2020-11-22 11:56 GMT

ಉಡುಪಿ, ನ.22: ನಗರದ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು ಮುಂಜಾನೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ, ಕಾಕಡ ಆರತಿ, ಶ್ರೀ ದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪ ದರ್ಶನ ನೆರವೇರಿಸಲಾಯಿತು.

ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಶ್ರೀಮಹಾಕಾಳಿ ಅವತಾರ, ಗರುಡ ವಾಹನದ ರಂಗೋಲಿಯ ಚಿತ್ತಾರ ಮೂಡಿಬಂದಿದೆ. ಹೂಗಳಿಂದ ರಚಿಸಿದ ರಂಗೋಲಿಯಲ್ಲಿ, ಹಣತೆಯ ದೀಪದಿಂದ ಓಂ, ಸ್ವಸ್ತಿಕ್, ಶಂಖ ಚಕ್ರಗಳನ್ನು ರಚಿಸಲಾಯಿತು. ದೇವರಿಗೆ ವಿಶೇಷ ಅಲಂಕಾರ ಹಾಗೂ ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.

ಪ್ರಧಾನ ಅರ್ಚಕ ದಯಘಾನ್ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿ ದರು. ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಗಣೇಶ್ ಕಿಣಿ, ವಸಂತ್ ಕಿಣಿ, ವಿಶ್ವನಾಥ್ ಭಟ್, ನರಹರಿ ಶೆಣೈ, ವಿಶಾಲ್ ಶೆಣೈ, ಮಟ್ಟಾರ್ ಗಣೇಶ್ ಕಿಣಿ, ಭಾಸ್ಕರ್ ಶೆಣೈ, ಶ್ಯಾಂಪ್ರಸಾದ್ ಕುಡ್ವ, ಪ್ರದೀಪ್ ರಾವ್, ಮಟ್ಟಾರ್ ಸತೀಶ್ ಕಿಣಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News