ಕಿರುತೆರೆ ನಟಿ ಲೀನಾ ಆಚಾರ್ಯ ನಿಧನ

Update: 2020-11-22 13:19 GMT

ಮುಂಬೈ: ಕ್ಲಾಸ್ ಆಫ್ 2020 ಹಾಗೂ ಸೆಥ್ ಜೀ ಧಾರಾವಾಹಿಗಳಲ್ಲಿ ನಟಿಸಿರುವ  ಕಿರು ತೆರೆ ನಟಿ ಲೀನಾ ಆಚಾರ್ಯ ಕಿಡ್ನಿ ಸಂಬಂಧಿತ ಸಮಸ್ಯೆಯಿಂದಾಗಿ ನಿಧನರಾಗಿದ್ದಾರೆ ಎಂದು ನಟ ರೋಹನ್ ಮೆಹ್ರಾ ತಿಳಿಸಿದ್ದಾರೆ.

ನಟಿ ಶನಿವಾರ ದಿಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕ್ಲಾಸ್ ಆಫ್ 2020ರಲ್ಲಿ ಲೀನಾ ರೊಂದಿಗೆ ಸಹ ನಟರಾಗಿದ್ದ ಮೆಹ್ರಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ನಾನು ನಿನ್ನೆ ಲೀನಾ ಅವರ ಸಹೋದರನನ್ನು ಭೇಟಿಯಾದಾಗ ಲೀನಾ ಅವರಿಗೆ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆ ಇರುವ ವಿಚಾರ ಗೊತ್ತಾಯಿತು. ಆಕೆ ತಾಯಿ ದಾನ ಮಾಡಿರುವ ಕಿಡ್ನಿಯಲ್ಲಿ ಜೀವಿಸುತ್ತಿದ್ದರು ಎಂದು ಲೀನಾರ ಸಹ ನಟ ಆಯೂಷ್ ಆನಂದ್ ಹೇಳಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ಕ್ಲಾಸ್ ಆಫ್ 2020ರ ಶೂಟಿಂಗ್ ನಲ್ಲಿದ್ದೆವು. ನಾನೀಗ ನಿಮ್ಮಿಂದ ವಂಚಿತನಾಗಿದ್ದೇನೆ ಎಂದು ರೋಹನ್ ಮೆಹ್ರಾ ಫೋಟೊದ ಜೊತೆ ಇನ್ ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News