ಹೆಜಮಾಡಿ ದೇವಳಕ್ಕೆ ಧ್ವಜಸ್ಥಂಭ ಸಮರ್ಪಣೆ

Update: 2020-11-22 13:34 GMT

ಪಡುಬಿದ್ರಿ: ಗ್ರಾಮ ದೇವಳ ಜೀರ್ಣೋಧ್ಧಾರವಾದರೆ ಗ್ರಾಮದ ಅಭಿವೃದ್ಧಿಯಾದಂತೆ. ಗ್ರಾಮ ದೇವಳಗಳಲ್ಲಿ ಇರುವ ಧ್ವಜ ಸ್ಥಂಭಗಳು ವಿಜಯ ಪತಾಕೆಯ ಸಂಕೇತ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳುತ್ತಿರುವ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ನೀಡಲ್ಪಟ್ಟ ಧ್ವಜಸ್ಥಂಭವನ್ನು ಮೆರವಣಿಗೆ ಮೂಲಕ ರವಿವಾರ ದೇವಳಕ್ಕೆ ಸಮರ್ಪಿಸಲಾಯಿತು.

ಹೆಜಮಾಡಿ ಗರಡಿಮನೆ ದಿ.ಕುಮುದಾ ಎಸ್.ಶೆಟ್ಟಿ ಸವಿನೆನಪಿಗಾಗಿ ಅವರ ಪತಿ ಸದಾಶಿವ ಎಸ್.ಶೆಟ್ಟಿಯವರಿಂದ ನೀಡಲ್ಪಟ್ಟ ಧ್ವಜಸ್ಥಂಭದ ಮರವಣಿಗೆ ನಡೆಯಿತು. ಸುಳ್ಯದಿತರಲಾದ ಧ್ವಜಸ್ಥಂಭವನ್ನು ಬಪ್ಪನಾಡು ದೇವಳದಿಂದ ಪೂಜೆ ಸಲ್ಲಿಸಿ ಹೆಜಮಾಡಿ ಬಸ್ಸುನಿಲ್ದಾಣದವರೆಗೆ ವಾಹನ ರ್ಯಾಲಿ ಮೂಲಕ ತರಲಾಯಿತು. ಬಳಿಕ ಅಲ್ಲಿಂದ ಗ್ರಾಮಸ್ಥರ ವಿವಿಧ ಬಿರುದಾವಳಿಯೊಂದಿಗೆ ಮೆರವಣಿಗೆ ಮೂಲಕ ದೇವಳಕ್ಕೆ ತಂದೊಪ್ಪಿಸಲಾಯಿತು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಜಿಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ಮತ್ತು ಗೀತಾಂಜಲಿ ಸುವರ್ಣ, ತಾಪಂ ಮಾಜಿ ಅಧ್ಯಕ್ಷೆ ನೀತಾ ಗುರುರಾಜ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಯಂತ್ ಶೆಟ್ಟಿ ಪುಣೆ, ಕಾರ್ಯಾಧ್ಯಕ್ಷ ಎಚ್‍ಎಸ್ ರಘುಪತಿ ಭಟ್, ಉಪಾಧ್ಯಕ್ಷರಾದ ಅರುಣ್ ಶೆಟ್ಟಿ ಪಡುಮನೆ, ಜಿನರಾಜ ಬಂಗೇರ, ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಹರೀಶ್ ದೇವಾಡಿಗ ಮತ್ತು ರಾಜೇಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಎಸ್.ದಿವಾಕರ ಹೆಜ್ಮಾಡಿ, ಕೋಶಾಧಿಕಾರಿ ಎಚ್‍ಆರ್ ರಮೇಶ್ ಭಟ್, ಮುಂಬೈ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎಸ್.ಶೆಟ್ಟಿ, ಬೆಂಗಳೂರು ಸಮಿತಿಯ ಕೋಶಾಧಿಕಾರಿ ಪುರುಷೋತ್ತಮ ಗುರಿಕಾರ, ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಮೊಕ್ತೇಸರರಾದ ಶೇಷಗಿರಿ ರಾವ್, ಗಣೇಶ್ ಆಚಾರ್ಯ, ಶಂಕರ ಶೆಟ್ಟಿ, ಸುರೇಶ್ ದೇವಾಡಿಗ, ರವೀಂದ್ರ ಕೋಟ್ಯಾನ್, ಪಾಂಡುರಂಗ ಕರ್ಕೇರ, ಜಯಂತ್ ಪುತ್ರನ್, ಇಂದಿರೇಶ್ ಸಾಲ್ಯಾನ್, ಸಂಜೀವ ಟಿ., ಹರೀಶ್ ಶೆಣೈ ಮತ್ತು ಜಯಂತಿ ಶೇಖರ ಆಚಾರ್ಯ ಉಪಸ್ಥಿತರಿದ್ದರು.

ದೇವಳದ ತಂತ್ರಿ ರಾಧಾಕೃಷ್ಣ ತಂತ್ರಿ ಎಡಪದವು ನೇತೃತ್ವದಲ್ಲಿ ಅರ್ಚಕರಾದ ರಾಮಚಂದ್ರ ಭಟ್, ಪದ್ಮನಾಭ ಭಟ್, ಶ್ರೀನಿವಾಸ ಆಚಾರ್ಯ ಮತ್ತಿ ಪದ್ಮನಾಭ ಆಚಾರ್ಯ ಧಾರ್ಮಿಕ ವಿಧಿ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News