ಮುಅಲ್ಲಿಂ ಫೆಸ್ಟ್-2020: ಭಾಷಣ ಸ್ಪರ್ಧೆಯಲ್ಲಿ ಆತೂರು ರೇಂಜ್‍ನ ಮಜೀದ್ ದಾರಿಮಿ ಪ್ರಥಮ
Update: 2020-11-22 19:09 IST
ಪುತ್ತೂರು: ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಮುಅಲ್ಲಿಂ ಫೆಸ್ಟ್-2020 ಇದರ ಭಾಷಣ ಸ್ಪರ್ಧೆಯಲ್ಲಿ ಆತೂರು ರೇಂಜ್‍ನ ಮಜೀದ್ ದಾರಿಮಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಆತೂರು ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಇದರ ಉಪಾಧ್ಯಕ್ಷರಾಗಿರುವ ಮಜೀದ್ ದಾರಿಮಿಯವರು ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.