ಜನರ ಮೇಲೆ ಗೋ ತೆರಿಗೆ ವಿಧಿಸಲು ಮುಂದಾಗಿದೆ ಈ ರಾಜ್ಯ ಸರಕಾರ

Update: 2020-11-23 08:04 GMT

ಭೋಪಾಲ್: ಗೋ ಕಲ್ಯಾಣ ಚಟುವಟಿಕೆಗಳಿಗೆ ಹೆಚ್ಚುವರಿ ಹಣ ಸಂಗ್ರಹಿಸಲು ಮಧ್ಯಪ್ರದೇಶ ಸರಕಾರ ಗೋಸೇವಾ ಕರ್(ಗೋ ಸೆಸ್)ವಿಧಿಸಲು ಚಿಂತನೆ ನಡೆಸಿದೆ.

ಸಾಕಷ್ಟು ಹಣ ಸಂಗ್ರಹಿಸುವ ಜೊತೆ ಗೋ ಸಂರಕ್ಷಣೆಯ ಪವಿತ್ರ ಕಾರ್ಯದಲ್ಲಿ ಜನತೆ ಪಾಲ್ಗೊಳ್ಳುವುದನ್ನು ಸೆಸ್ ಖಚಿತಪಡಿಸುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಂದಾಯ, ಅರಣ್ಯ, ವಸತಿ, ರೈತರ ಕಲ್ಯಾಣ, ಪಂಚಾಯತ್ ಹಾಗೂ ಗ್ರಾಮೀಣಾಭಿವೃದ್ಧಿ, ಪಶು ಸಂಗೋಪನೆ ಹಾಗೂ ಸಾಮಾಜಿಕ ನ್ಯಾಯದ ಖಾತೆಗಳನ್ನು ಹೊಂದಿರುವ ಆರು ಸಂಪುಟ ಸಚಿವರನ್ನು ಒಳಗೊಂಡ ಹಸುಗಳ ಕುರಿತ ಸಚಿವರ ಸಮಿತಿಯನ್ನು ಬುಧವಾರ ರಚಿಸಿದೆ.

ಹಸುವಿನ ರಕ್ಷಣೆ ಹಾಗೂ ಸಂರಕ್ಷಣೆಗಾಗಿ ರಾಜ್ಯಕ್ಕೆ ಹಣದ ಅಗತ್ಯವಿರುವುದರಿಂದ ಗೋ ಸೆಸ್ ವಿಧಿಸುವ ಬಗ್ಗೆ ಚರ್ಚಿಸಲಾಗಿದೆ. ತೆರಿಗೆ ಮೇಲಿನ ತೆರಿಗೆ ಅತ್ಯಲ್ಪವಾಗಿದ್ದು ಶೇ.0.1ರಿಂದ 0.5 ರ ವರೆಗೆ ಇರುತ್ತದೆ.ಹಣಕಾಸು ಇಲಾಖೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮಧ್ಯಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಪಶುಸಂಗೋಪನೆ)ಜೆ.ಎನ್. ಕನ್ಸೋತಿಯಾ 'ದಿ ಪ್ರಿಂಟ್'‌ಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News