ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಮೇಲೆ ಪರಿಣಾಮ : ಡಾ. ಜಯಪ್ರಕಾಶ್

Update: 2020-11-23 11:44 GMT

ಉಡುಪಿ, ನ.23: ಕರಾವಳಿ ಉಷ್ಣವಲಯದ ಪ್ರದೇಶವಾಗಿದ್ದು, ಮಣ್ಣಿನ ವೈವಿಧ್ಯತೆ, ತಾಪಮಾನ ಹಾಗೂ ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯು ಮಣ್ಣಿನ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಜಯಪ್ರಕಾಶ್ ಹೇಳಿದ್ದಾರೆ.

ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಬ್ರಹ್ಮಾವರ ಕೃಷಿ ವಿಜ್ಷಾನ ಕೇಂದ್ರದ ಸಹಯೋಗದೊಂದಿಗೆ ನ.21ರಂದು ಕೃಷಿಕರಿಗಾಗಿ ಆಯೋಜಿಸಲಾದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಣ್ಣಿನ ಆರೋಗ್ಯ ಹಾಗೂ ಫಲವತ್ತತೆ ಕುರಿತು ಮಾತನಾಡುತಿದ್ದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಹಿರಿಯ ವಿಜ್ಞಾನಿ ಡಾ. ಧನಂಜಯ್ ಬಿ., ವೈಜ್ಞಾನಿಕ ರೀತಿಯ ನೀರಿನ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು. ಡಾ.ಚೈತನ್ಯ ಮಲ್ಲಿಗೆ ಗಿಡದ ಬೆಳವಣಿಗೆ ಹಾಗೂ ಸಮಸ್ಯೆಗಳ ಬಗ್ಗೆ ವಿವರಿಸಿದರು. ಡಾ.ಸಚಿನ್ ಯು.ಎಸ್. ಮಲ್ಲಿಗೆ ಬೆಳೆಯಲ್ಲಿ ಕೀಟ ಹಾಗೂ ರೋಗಗಳ ತಡೆಗಟ್ಟುವಿಕೆಯ ಕುರಿತು ಮಾಹಿತಿ ನೀಡಿದರು.

ಪ್ರಗತಿಪರ ಸಾವಯವ ಕೃಷಿಕ ರಾಮಕೃಷ್ಣ ಶರ್ಮ ಮಾತನಾಡಿ, ವೈಜ್ಞಾನಿಕ ಕೃಷಿ, ರೈತ ಸಂಘಟನೆ ಹಾಗೂ ರೈತ ಸಮೃದ್ದಿಯು ಮೂಲವುಂತ್ರವಾಗಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಗಣೇಶ್ ಐತಾಳ್ ವಂದಿಸಿದರು. ಗಣಕಯಂತ್ರ ವಿಭಾಗದ ರಮ್ಯಶ್ರೀ ಕಾರ್ಯಕ್ರಮ ನಿರೂಪಿಸಿ ದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಂದೀಪ್ ನಾಯಕ್ ಕಾರ್ುಕ್ರಮವನ್ನು ಆಯೋಜಿಸಿದ್ದರು.

ಬಳಿಕ ವಿಜ್ಞಾನಿಗಳ ಹಾಗೂ ರೈತರ ಉಪಸ್ಥಿತಿಯಲ್ಲಿ ಫೆಲಿಕ್ಸ್ ಡಯಾಸ್ ಅವರ ಮನೆಯಲ್ಲಿ ಗಿಡ ನೆಡುವ ಹಾಗೂ ಮಣ್ಣು ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News