ಬೆಳುವಾಯಿ: ಖಲಂದರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ

Update: 2020-11-23 13:22 GMT

ಬೆಳುವಾಯಿ: ಖಲಂದರ್ ಚಾರಿಟೇಬಲ್ ಟ್ರಸ್ಟ್ ಬೆಳುವಾಯಿ ಮತ್ತು ಬ್ಲಡ್ ಹೆಲ್ತ್ ಕೇರ್ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ರಕ್ತನಿಧಿ ಇವರ ಸಹಯೋಗದೊಂದಿಗೆ ಬೆಳುವಾಯಿಯ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಸುಲೈಮಾನ್ ಶೇಖ್ ಅಧ್ಯಕ್ಷತೆಯಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.

ಟ್ರಸ್ಟ್‌ನ ಗೌರವಾಧ್ಯಕ್ಷ ಅಬ್ದುಲ್ ರಹ್ಮಾನ್ ಖಲಂದರ್ ಸಾಹೇಬ್ ಶಿಬಿರವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ  ಪುರಸ್ಕೃತ ಗಣಿತ ಶಿಕ್ಷಕ ಯಾಕುಬ್ ಮಾಸ್ಟರ್ ಕೊಯ್ಯೂರು, ಆಪತ್ಬಾಂಧವ ಸಾಣೂರಿನ ಆಸಿಫ್, 57 ಬಾರಿ ದಾಖಲೆಯ ರಕ್ತದಾನ ಮಾಡಿದ ಸಮಾಜ ಸೇವಕ ಪ್ರವೀಣ್ ಜೈನ್ ಬೆಳುವಾಯಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಬ್ಲೋಸಂ ಶಾಲಾ ಸಂಚಾಲಕ ಸೈಮನ್ ಮಸ್ಕರೇನ್ಹಸ್, ಬೆಳುವಾಯಿ ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಸಲೀಮ್, ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಕೆ.ಎಂ.ಸಿ. ವೈದ್ಯ ಡಾ. ಹರ್ಷಕುಮಾರ್, ಅಬ್ದುಲ್ ಹಮೀದ್ ಮೂಡುಬಿದಿರೆ, ಬೆಳುವಾಯಿ ಬಂಗ್ಲೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಝೀರ್ ಅಹ್ಮದ್, ಮುಖ್ಯೋಪಾಧ್ಯಾಯ ಜಂಜೀಕರ್, ಕಾಂತಾವರ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯ ಎಸ್. ಕೋಟ್ಯಾನ್, ಬೆಳುವಾಯಿ ಪಂಚಾಯತ್ ಮಾಜಿ ಅಧ್ಯಕ್ಷ ಭಾಸ್ಕರ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಬ್ಲಡ್ ಹೆಲ್ಪ್ ಕೇರ್ ಅಧ್ಯಕ್ಷ ನಝೀರ್ ಉಳ್ಳಾಲ, ಸಂಚಾಲಕ ಸಂಶುದ್ದೀನ್ ಬಳ್ಕುಂಜೆ, ಖಲಂದರ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ, ಕೋಶಾಧಿಕಾರಿ ನಾಸಿರ್ ಹುಸೈನ್ ಬೆಳುವಾಯಿ,  ಮುಹಮ್ಮದ್ ಇಮ್ದಾದ್ ಉಡುಪಿ, ರೋಯಲ್ ಅಬ್ದುಲ್ ಹಮೀದ್ ಮೂಡುಬಿದಿರೆ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರಿನ ರಫೀಕ್ ಮಾಸ್ಟರ್ ಸನ್ಮಾನಿತರನ್ನು ಪರಿಚಯಿಸಿದರು. ಸಂಶುದ್ದೀನ್ ಬಳ್ಕುಂಜೆ ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ಬೆಳುವಾಯಿ ಕಾಂತಾವರೆ, ಸಾಣೂರು ಹಾಗೂ ಸುತ್ತಮುತ್ತಲ ಪ್ರದೇಶಗಳ ಸುಮಾರು 103 ಮಂದಿ ಶಿಬಿರಾರ್ಥಿಗಳು ರಕ್ತದಾನಗೈದರು. ಶಿಬಿರ ನಡೆಸಲು ಸ್ಥಳಾವಕಾಶ ಒದಗಿಸಿಕೊಟ್ಟ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಸೈಮನ ಮಸ್ಕರೇನ್ಹಸ್ ರನ್ನು ಟ್ರಸ್ಟ್ ಅಧ್ಯಕ್ಷರಾದ ಸುಲೈಮಾನ್ ಶೇಖ್  ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News