×
Ad

ಅಡ್ಯಾರ್ ಗ್ರಾಪಂ: ವಿವಿಧ ರಸ್ತೆಗಳ ಕಾಂಕ್ರಿಟೀಕರಣಕ್ಕೆ ಚಾಲನೆ

Update: 2020-11-23 19:36 IST

ಮಂಗಳೂರು, ನ.23: ಅಡ್ಯಾರ್ ಗ್ರಾಪಂ ವ್ಯಾಪ್ತಿಯ ಅಡ್ಯಾರ್ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಹಾಗೂ ಹಿಂಬದಿ ರಸ್ತೆ, ಅಡ್ಯಾರು ಕೆಮಂಜೂರು-ಬಿರ್ಪುಗುಡ್ಡೆ ರಸ್ತೆ, ಅಡ್ಯಾರು ವಳಬೈಲು ಮುಖ್ಯ ರಸ್ತೆ, ಅಡ್ಯಾರು ವಳಬೈಲು-ದಯಂಬು ರಸ್ತೆ, ಅಡ್ಯಾರು ವಳಬೈಲು ಅಡ್ಡ ರಸ್ತೆ, ಅಡ್ಯಾರು ಕೆಮಂಜೂರು-ಬನತ್ತಡಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ರವಿವಾರ ಚಾಲನೆ ನೀಡಿದರು.

ಈ ಮಧ್ಯೆ ಅಡ್ಯಾರ್ 3ನೇ ವಾರ್ಡಿನ ಬೂತ್ ನಂಬ್ರ 238, 239ರಲ್ಲಿ 18 ಲಕ್ಷ ರ. ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಮೂರು ರಸ್ತೆಗಳನ್ನು ಉದ್ಘಾಟಿಸಿದರು.

ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಸುಧಾಕರ್ ಅಡ್ಯಾರ್, ಮುಖಂಡರಾದ ಮಹಾಬಲ ಅಡ್ಯಾರ್, ಭೋಜ ಪೂಜಾರಿ, ಶೇಖರ್ ಶೆಟ್ಟಿ, ಸುಜಿತ್, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ, ಅಜಿತ್ ಶೆಟ್ಟಿ, ಗಣೇಶ್ ರೈ, ಯಾದವ ಸಾಲ್ಯಾನ್, ಜನಾರ್ದನ ಅರ್ಕುಳ, ಶ್ರವಣ್ ಆಳ್ವ, ವಿಜಯ ಕೊಟ್ಟಾರಿ, ರವಿರಾಜ್ ಚೌಟ, ಮಹಾಬಲ ಪೂಜಾರಿ, ಕೃಷ್ಣ, ಮಣೀಶ್ ರೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News