‘ಬೆಲ್ಕಿರಿ’ ದ್ವೈಮಾಸಿಕಕ್ಕೆ ಬರಹ ಆಹ್ವಾನ

Update: 2020-11-23 14:08 GMT

ಮಂಗಳೂರು, ನ.23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಎರಡು ತಿಂಗಳಿಗೊಮ್ಮೆ ಪ್ರಕಟಿಸುವ ‘ಬೆಲ್ಕಿರಿ’ ದ್ವೈಮಾಸಿಕ ಸಂಚಿಕೆಯಲ್ಲಿ ಪ್ರಕಟಿಸಲು ಬ್ಯಾರಿ ಇತಿಹಾಸ/ಸಂಶೋಧನಾ ಲೇಖನಗಳು/ಬ್ಯಾರಿ ಪುಸ್ತಕ ಪರಿಚಯ/ಮರೆಯಬಾರದ ಬ್ಯಾರಿ ಮಹನೀಯರು/ಬ್ಯಾರಿ ಕಥೆ/ಕವನ/ಚುಟುಕುಗಳನ್ನು ಆಹ್ವಾನಿಸಿದೆ.

ಟೈಪ್ ಮಾಡಿ ಕಳುಸುವುದಾದರೆ ನುಡಿ ಫಾಂಟ್‌ನಲ್ಲಿ ಕಳುಹಿಸಬೇಕು. ಹೆಸರು ಮತ್ತು ವಿಳಾಸವಿಲ್ಲದ ಲೇಖನಗಳನ್ನು ಪ್ರಕಟಿಸಲಾಗುವುದಿಲ್ಲ. ಪ್ರಕಟಿತ ಬರೆಹದ ಲೇಖಕರಿಗೆ ಗೌರವ ಸಂಭಾವನೆ ನೀಡಲಾಗುವುದು. ಲೇಖನಗಳನ್ನು ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಲೂಕು ಪಂಚಾಯತ್ ಹಳೆ ಕಟ್ಟಡ, ಮಿನಿ ವಿಧಾನಸೌಧದ ಬಳಿ ಮಂಗಳೂರು 575001 ಈ ವಿಳಾಸಕ್ಕೆ ಅಥವಾ bearyacademy@yahoo.in ಅಥವಾ ಬೆಲ್ಕಿರಿ ದ್ವೈಮಾಸಿಕ ಸಂಚಿಕೆಯ ಸಂಪಾದಕ, ಅಕಾಡಮಿಯ ಸದಸ್ಯ ಶಂಶೀರ್ ಬುಡೋಳಿ (ವಾಟ್ಸಪ್ ನಂಬ್ರ 9008857485)ಗೆ ಕಳುಹಿಸಿ ಕೊಡುವಂತೆ ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News