ಸಿಟಿ ಗೋಲ್ಡ್‌ನಲ್ಲಿ ‘ಮೆಗಾ ಮಂಗಳೂರು ಫೀಸ್ಟ್’ಗೆ ಚಾಲನೆ

Update: 2020-11-23 14:23 GMT

ಮಂಗಳೂರು, ನ.23: ಕೇರಳ, ಕರ್ನಾಟಕ ಸಹಿತ ವಿವಿಧೆಡೆ ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್ ಸಂಸ್ಥೆಯ 20ನೇ ವಾರ್ಷಿಕೋತ್ಸವ ಪ್ರಯುಕ್ತ ನಗರದ ಕಂಕನಾಡಿ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಸೋಮವಾರ ಸಂಜೆ ‘ಮೆಗಾ ಮಂಗಳೂರು ಫೀಸ್ಟ್’ಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಅಂತರಾಷ್ಟ್ರೀಯ ಮಟ್ಟದ ಹೆಸರಾಂತ ಬ್ರಾಂಡ್‌ಗಳ ‘ವಾಚೆಸ್’ಗಳನ್ನು ಮಾಜಿ ಶಾಸಕ ಡಾ.ಬಿ.ಎ. ಮೊಯ್ದಿನ್ ಬಾವ ಲೋಕಾರ್ಪಣೆಗೊಳಿಸಿದರು. ‘ಪರ್ಮನೆಂಟ್ ಫ್ಯೂಚರ್ ಅಸೆಟ್ (ಪಿಎಫ್‌ಎ) ಸ್ಕೀಮ್’ಗೆ ವಿಶ್ವಾಸ್ ಬಾವ ಬಿಲ್ಡರ್ಸ್‌ನ ಚೇರ್‌ಮನ್ ಅಬ್ದುಲ್ ರವೂಫ್ ಪುತ್ತಿಗೆ ಚಾಲನೆ ನೀಡಿದರು.

‘ಕೆನ್ನಾ ಡೈಮಂಡ್ಸ್’ನ್ನು ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶಾಂತಿ ರೊಚೆ, ‘ಇಟಾಲಿಯನ್ ಕಲೆಕ್ಷನ್ಸ್’ನ್ನು ಬಂಟ್ವಾಳ ನಗರಸಭೆ ಕೌನ್ಸಿಲರ್ ಝೀನತ್ ಅಬ್ದುಲ್ ಖಾದರ್, ‘ಕಿಡ್ಸ್ ಕಲೆಕ್ಷನ್ಸ್’ನ್ನು ಮನಪಾದ ಕದ್ರಿಯ ಕಾರ್ಪೊರೇಟರ್ ಕಾವ್ಯಾ ನಟರಾಜ್ ಆಳ್ವ, ‘ಆ್ಯಂಟಿಕ್ಯೂ’ನ್ನು ಸಹನಾ ವುಮೆನ್ಸ್ ಕೌನ್ಸೆಲಿಂಗ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಖೈರುನ್ನಿಸಾ ಸೈಯದ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಸಿಟಿ ಗೋಲ್ಡ್ ಸಂಸ್ಥೆಯು ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಸಂಸ್ಥೆಯು 20ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಭವಿಷ್ಯದಲ್ಲಿ ಸಂಸ್ಥೆಯ ಇನ್ನಷ್ಟು ಮಳಿಗೆಗಳು ಸ್ಥಾಪನೆಯಾಗಬೇಕು ಎಂದು ಶುಭ ಹಾರೈಸಿದರು.

ವಿಶ್ವಾಸ್ ಬಾವ ಬಿಲ್ಡರ್ಸ್‌ನ ಚೇರ್‌ಮನ್ ಅಬ್ದುಲ್ ರವೂಫ್ ಪುತ್ತಿಗೆ ಮಾತನಾಡಿ, ಸಂಸ್ಥೆಯು ಕೇವಲ ಉದ್ಯಮಕ್ಕೆ ಮಾತ್ರ ಪ್ರಾಶಸ್ತ್ಯ ನೀಡದೇ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಇದರಿಂದ ಸಾಕಷ್ಟು ಬಡವರಿಗೆ ಸಹಾಯವಾಗಿದೆ. ಕೇರಳದಲ್ಲಿ ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸುವ ಮೂಲಕ ಶ್ಲಾಘನೆಗೆ ಪಾತ್ರವಾಗಿದೆ. ಚಾರಿಟಿಯಿಂದ ರೋಗಿಗಳಿಗೆ ಚಿಕಿತ್ಸೆ, ಔಷಧ ನೀಡುವುದು ಸೇರಿದಂತೆ ಬಡವರ ಪಾಲಿನ ಆಶಾಕಿರಣವಾಗಿದೆ ಎಂದರು.

ಸಿಟಿ ಗೋಲ್ಡ್ ಸಂಸ್ಥೆಯ ನಿರ್ದೇಶಕ ಮುಹಮ್ಮದ್ ದಿಲ್‌ಶಾದ್ ಮಾತನಾಡಿ, ಸಿಟಿಗೋಲ್ಡ್ ಮಳಿಗೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ ಡೈಮಂಡ್‌ಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿಷ್ಠಿತ ‘ನೊರಾ ಕಲೆಕ್ಷನ್’ ಭಾರತದಲ್ಲೇ ಮೊದಲ ಬಾರಿಗೆ ಗ್ರಾಹಕರಿಗೆ ಲಭ್ಯವಾಗಿಸುವಲ್ಲಿ ಸಿಟಿ ಗೋಲ್ಡ್ ಯಶಸ್ವಿಯಾಗಿದೆ ಎಂದು ಹೇಳಿದರು.

ಸಾಧಕರಾದ ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮೈಮುನಾ ಫೌಂಡೇಶನ್‌ನ ಚೇರ್‌ಮನ್ ಆಸಿಫ್ ಆಪದ್ಬಾಂಧವ ಅವರನ್ನು ಸಿಟಿ ಗೋಲ್ಡ್ ಸಂಸ್ಥೆಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸಮಾರಂಭದಲ್ಲಿ ಸಿಟಿ ಗೋಲ್ಡ್ ಸಂಸ್ಥೆಯ ನಿರ್ದೇಶಕ ನೌಶಾದ್, ಯುವ ಉದ್ಯಮಿ ಮೊಹ್ಸಿನ್ ಅಹ್ಮದ್ ಸಾಮಣಿಗೆ, ಶಿಕ್ಷಕ ಬಿ.ಎಂ. ಮುಹಮ್ಮದ್ ತುಂಬೆ, ಸಿಟಿ ಗೋಲ್ಡ್ ಸಂಸ್ಥೆಯ ಸೇಲ್ಸ್ ಮ್ಯಾನೇಜರ್ ಹಫೀಝ್ ಸಹಿತ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಬ್ದುಲ್ ಅಝೀಝ್ ಸ್ವಾಗತಿಸಿದರು. ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ಮಾರ್ಕೆಟಿಂಗ್‌ ಮ್ಯಾನೇಜರ್ ಇಮ್ರಾನ್ ವಂದಿಸಿದರು.

ಬಂಪರ್ ಬಹುಮಾನ: ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಅಂಗವಾಗಿ ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ಪ್ರಕಟಿಸಲಾಗುತ್ತಿದೆ. ಎಕ್ಸ್‌ಕ್ಲೂಸಿವ್ ಡೈಮಂಡ್ ನೆಕ್ಲೆಸ್‌ನ್ನು ಬಂಪರ್ ಬಹುಮಾನವಾಗಿ ಗೆಲ್ಲುವ ಸುವರ್ಣಾವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

ವೀಕ್ಲಿ ಲಕ್ಕೀ ಡ್ರಾ: ಸಿಟಿ ಗೋಲ್ಡ್‌ನಿಂದ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ಸಮರ್ಪಿಸುತ್ತಿದ್ದು, ಪ್ರತೀ ವಾರವೂ ಲಕ್ಕೀ ಡ್ರಾ ಹಮ್ಮಿಕೊಳ್ಳಲಾಗಿದೆ. ಪ್ರತೀ ಖರೀದಿಯ ಮೇಲೆ ಕೂಪನ್ ವಿತರಿಸುತ್ತಿದ್ದು, ವಿಜೇತ ಗ್ರಾಹಕರಿಗೆ ಡೈಮಂಡ್ ರಿಂಗ್‌ನ್ನು ಉಚಿತವಾಗಿ ನೀಡಲಾಗುವುದು. ಪ್ರತೀ ಎರಡು ಲಕ್ಷ ರೂ. ಖರೀದಿಯ ಮೇಲೆ ಒಂದು ವೋಚರ್‌ನ್ನು ಉಚಿತವಾಗಿ ನೀಡಲಾಗುವುದು. ನೊರಾ ಇಟಾಲಿಯನ್ ಕಲೆಕ್ಷನ್ಸ್, ಕೆನ್ನಾ ಯುನಿಕ್ ಡೈಮಂಡ್ಸ್ ಪ್ರದರ್ಶನ, ಮಾರಾಟವನ್ನು ಆಯೋಜಿಸಲಾಗಿದೆ.

ಮೇಕಿಂಗ್ ಚಾರ್ಜೆಸ್ ಕಡಿತ: ಪ್ರತಿ ಚಿನ್ನದ ಖರೀದಿಯ ವೆಚ್ಚದ ಮೇಲೆ ಶೇ.55, ವಜ್ರ ಖರೀದಿಯ ಮೇಲೆ ಶೇ.25, ಅನ್‌ಕಟ್ ವಜ್ರದ ಖರೀದಿ ಮೇಲೆ ಶೇ.25 ರಷ್ಟು ಕಡಿತದ ಸೌಲಭ್ಯವನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಅತ್ಯಮೂಲ್ಯ ಹಾರಗಳಿಗೆ (ನೆಕ್ಲೇಸ್) ಯಾವುದೇ ರೀತಿಯ ಮೇಕಿಂಗ್ ಚಾರ್ಜೆಸ್ ಇರುವುದಿಲ್ಲ. ಸೋಮವಾರದಿಂದ ಆರಂಭಗೊಂಡಿರುವ ಸಿಟಿ ಗೋಲ್ಡ್‌ನ ಮೆಗಾ ಮಂಗಳೂರು ಫೀಸ್ಟ್ ಡಿಸೆಂಬರ್‌ವರೆಗೂ ಮುಂದುವರಿಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News