ಸಜ್ಜನ ಪ್ರತಿಷ್ಠಾನದ ವತಿಯಿಂದ ಕೊರೋನ ವಾರಿಯರ್ಸ್‌ ಗಳಿಗೆ ಸನ್ಮಾನ

Update: 2020-11-23 15:08 GMT

ಮಂಗಳೂರು : ಕೊರೋನ ಕಾಲದಲ್ಲಿ ಸುಳ್ಯದ ಪತ್ರಕರ್ತರು ತೋರಿದ ಕಾಳಜಿಗಾಗಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಪತ್ರಕರ್ತರನ್ನು ಸನ್ಮಾನಿಸಲಾಯಿತು.

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ವತಿಯಿಂದ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಗೆ ಸನ್ಮಾನ ಹಾಗು ಕನ್ನಡ ರಾಜ್ಯೋತ್ಸವ ಸಲುವಾಗಿ ನವೆಂಬರ್ ಒಂದರಂದು ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಭಾಷಣ ಸ್ಪರ್ಧೆ ಯಲ್ಲಿ ವಿಜೇತರಾದ ಅನನ್ಯ ಕೆ.ಟಿ ( ಪ್ರಥಮ) ಅಮರ್ ಕೆ.ಪಿ.(ದ್ವಿತೀಯ) ಲಿಖಿತಾ ಕೆ.ಎಸ್.( ತೃತೀಯ) ಸಮೀನಾ ಎಂ.ಎಸ್ (ಚತುರ್ಥ) ರವರಿಗೆ ಬಹುಮಾನ ವಿತರಣೆ ಶನಿವಾರ ನಡೆಯಿತು.

ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆಯವರ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಜ್ಜನ ಪ್ರತಿಷ್ಠಾನದ ಕೆಲಸ ಕಾರ್ಯ ಗಳು ಹಾಗು ಮುಂದಿನ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.

ಪತ್ರಿಕಾಗೋಷ್ಠಿಯಲ್ಲಿ  ಬಿಎಫ್ಎ (ನೋಂ) ಪ್ರಧಾನ ಕಾರ್ಯದರ್ಶಿ ಮತ್ತು ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ(ನೋಂ)  ಯ ಪ್ರಧಾನ ವ್ಯವಸ್ಥಾಪಕ ರಾದ ಅಶ್ರಫ್ ಟರ್ಲಿ , ಬಿಎಫ್ಎ ಮತ್ತು ಸಜ್ಜನ ಪ್ರತಿಷ್ಠಾನದ ಆಡಳಿತ ಸದಸ್ಯರಾದ ಅಬ್ದುಲ್ ವಹಾಬ್ , ವಿಸ್ಡಂ ವಿದ್ಯಾಸಂಸ್ಥೆ  ಬುಡೋಳಿಯ ಉಪನ್ಯಾಸಕರಾದ ಗಣೇಶರವರು ಹಾಗು ಸುದ್ದಿ ಶರೀಫ್ ಜಟ್ಡಿಪಳ್ಳರವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News