ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ : ಯುವಕನ ಬಂಧನ

Update: 2020-11-23 15:14 GMT

ಉಡುಪಿ, ನ. 23: ಮದುವೆಯಾಗುವುದಾಗಿ ನಂಬಿಸಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿರುವ ಆರೋಪದಲ್ಲಿ ಯುವಕನೋರ್ವನನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ.

ಪರ್ಕಳದ ಗಣೇಶ್(33) ಬಂಧಿತ ಆರೋಪಿ. ಈತ ಹಾಗೂ ಮಣಿಪಾಲದ ಯುವತಿ ಕಳೆದ 12ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈತ ಪ್ರೀತಿಸಿದ ಯುವತಿಯ ಬದಲು ಕಾರ್ಕಳದ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಎನ್ನಲಾಗಿದೆ.

ಇದನ್ನು ವಿರೋಧಿಸಿ ಯುವತಿ, ಗಣೇಶ್ ಮನೆ ಮುಂದೆ ಹೋಗಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಬಳಿಕ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಗಣೇಶ್, ಇದೇ ವಿಚಾರವಾಗಿ ಪಿನಾಯಿಲ್ ಸೇವಿಸಿ ಅಸ್ವಸ್ಥಗೊಂಡು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದನು. ಇದೀಗ ಯುವತಿ, ಗಣೇಶ್ ವಿರುದ್ಧ ಇಂದು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News