ಹೊಸ ಶಿಕ್ಷಣ ನೀತಿಯಿಂದ ಭಾರತ ವಿಶ್ವ ಗುರುವಿನ ಸ್ಥಾನದತ್ತ ಸಾಗಲು ಪೂರಕ : ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್

Update: 2020-11-23 16:20 GMT

ಮಂಗಳೂರು, ನ.23: ಹೊಸ ಶಿಕ್ಷಣ ನೀತಿಯಿಂದ ಭಾರತ ವಿಶ್ವ ಗುರುವಿನ ಸ್ಥಾನದತ್ತ ಸಾಗಲು ಪೂರಕ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.

ಅವರು ಇಂದು ಸುರತ್ಕಲ್‌ನ ಎನ್‌ಐಟಿಕೆಯ 18ನೆ ಘಟಿಕೋತ್ಸವ ದ ಮುಖ್ಯ ಅತಿಥಿಯಾಗಿ ವರ್ಚುವಲ್ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣದ ಸಂದೇಶವನ್ನು ನೀಡಿದರು.

ಹೊಸ ಶಿಕ್ಷಣ ನೀತಿ ಜಾರಿಯ ಬಗ್ಗೆ ದೇಶದ ಜನರಲ್ಲಿ ಉತ್ಸಹವಿದೆ.ದೇಶ ವಿಶ್ವ ಗುರುವಿನ ಸ್ಥಾನವನ್ನು ಅಲಂಕರಿಸಬೇಕಾದರೆ ಜ್ಷಾನ, ವಿಜ್ಞಾನ, ಸಂಶೋಧನಾ ಕ್ಷೇತ್ರದಲ್ಲಿ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಬೇಕಾಗಿದೆ ನಮ್ಮ ಇಚ್ಛಾ ಶಕ್ತಿಯನ್ನು ಪ್ರಕಟಿಸಬೇಕಾಗಿದೆ ಎಂದರು.

ದೇಶ ಕೋವಿಡ್-19ರ ಸಮಸ್ಯೆಯ ಕಾಲದಲ್ಲಿ ಈ ಸವಾಲನ್ನು ಎದುರಿಸಲು ಸಾಕಷ್ಟು ಸಂಸ್ಥೆಗಳು ಯುದ್ಧೋಪಾದಿಯಲ್ಲಿ ಕೈ ಜೋಡಿಸಿವೆ. ದೇಶ ಈ ಹಿಂದೆಯೂ ಹಲವು ಸಂಕಟದ ಸಂದರ್ಭದಲ್ಲಿ ಸಮರ್ಥವಾಗಿ ಎದ್ದು ನಿಂತಿದೆ. ದೇಶ ಹಲವು ಸಂಶೋಧನೆಗಳಲ್ಲಿ ಪೇಟೆಂಟ್ ಪಡೆಯು ವಂತಾಗಬೇಕು. ಈ ನಿಟ್ಟಿ ನಲ್ಲಿ ಹೊಸ ಶಿಕ್ಷಣ ನೀತಿ ತಂತ್ರಜ್ಞಾನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.ಮಾತೃ ಭಾಷೆಯ ಮೂಲಕ ಆರಂಭದ ಶಿಕ್ಷಣ ನೀಡುವುದು ಸೂಕ್ತ. ಜಪಾನ್, ಜರ್ಮನಿ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ಮಾತೃ ಭಾಷೆಯ ಮೂಲಕ ಆರಂಭದ ಶಿಕ್ಷಣ ನೀಡುವ ಮೂಲಕ ಜಗತ್ತಿನಲ್ಲಿ ಪ್ರಗತಿ ಸಾಧಿಸಿದ ರಾಷ್ಟ್ರಗಳಾಗಿವೆ. ಯುವ ಇಂಜಿನಿಯರ್ ಪದವೀಧರರು ದೇಶದ ಪ್ರಗತಿಗೆ ಸಮಾಜಕ್ಕೆ ,ಸಮಗ್ರ ವಿಶ್ವಕ್ಕೆ ತಮ್ಮ ಆದ ರೀತಿಯ ಕೊಡುಗೆ ನಿಡಲು ಬದ್ಧರಾಗಬೇಕು ಎಂದು ರಮೇಶ್ ಪೋಖ್ರಿಯಾಲ್ ಕರೆ ನೀಡಿದರು.

ಸುಧಾರಿತ ತಂತ್ರಜ್ಞಾನದ ಸಮರ್ಪಕ ಬಳಕೆ ದೇಶದ ಅಭಿವೃದ್ಧಿಗೆ ಪೂರಕ ಈ ನಿಟ್ಟಿನಲ್ಲಿ ಮೂಲ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ರಕ್ಷಣಾ ವಿಭಾಗದ ಕಾರ್ಯದರ್ಶಿ ಡಿ ಆರ್‌ಡಿ ಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಸಾಮಗ್ರಿಗಳ ಉತ್ಫಾದನೆ ಮತ್ತು ವಿಶ್ವ ಮಾರುಕಟ್ಟೆಗೆ ಬಿಡುಗಡೆ ಮಾಡುವ ದೇಶದ ಅಭಿವೃದ್ಧಿಗೆ ಸಂಶೊಧನಾ ಸಂಸ್ಥೆಗಳು ಮಹತ್ವದ ಕೊಡುಗೆ ನೀಡಬಹುದು ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ. ದೇಶದಲ್ಲಿ ಕೋವಿಡ್ -19 ಸಂದರ್ಭದಲ್ಲಿ ಸಾಕಷ್ಟು ಸವಾಲು ಗಳು ಎದುರಾಗಿತ್ತು. ಈ ಪೈಕಿ ಕೋವಿಡ್ ಸುರಕ್ಷತಾ ಸಾಮಾಗ್ರಿಗಳ ಉತ್ಫಾದನೆ .ಈ ಸವಾಲನ್ನು ಎದುರಿಸಲಾಯಿತು.ಪರಿಣಾಮವಾಗಿ ದೇಶದಲ್ಲಿಯೇ ದಿನವೊಂದಕ್ಕೆ 10 ಲಕ್ಷ ಮಾಸ್ಕ್‌ಗಳನ್ನು ಉತ್ಫಾದನೆ ಮಾಡಲು ಸಾಧ್ಯವಾಗಿದೆ.ನಾಲ್ಕು ತಿಂಗಳಲ್ಲಿ 47 ಸಾವಿರ ವೆಂಟಿಲೇಟರ್‌ಗಳನ್ನು ಉತ್ಫಾದಿಸಲು ಸಾಧ್ಯವಾಗಿದೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಘಟಿಕೋತ್ಸವದ ವರ್ಚುವಲ್ ಸಮಾರಂಭದಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸಂಜಯ್ ದೋತ್ರೆ , ಸಂಸದ ನಳಿನ್ ಕುಮಾರ ಕಟೀಲ್,ಶಾಸಕ ಡಾ.ಭರತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಅಧ್ಯಕ್ಷತೆಯನ್ನು ಎನ್‌ಐಟಿಕೆ ನಿರ್ದೇಶಕ ಮಂಡಳಿಯ ಅಧ್ಯಕ್ಷ ಡಾ.ಕೆ.ಬಲವೀರ ರೆಡ್ಡಿ ವಹಿಸದ್ದರು.

ಎನ್‌ಐಟಿಕೆಯ ನಿರ್ದೇಶಕ ಪ್ರೊ.ಉಮಾಮಹೇಶ್ವ ರಾವ್ ಸ್ವಾಗತಿಸಿದರು. ಎನ್‌ಐಟಿಕೆ ಆವರಣದ ಮೇಲ್ ಸೇತುವೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ವನ್ನು ಸಚಿವರು ನೆರವೇರಿಸಿದರು. ಘಟಿಕೋತ್ಸವ ಸಮಾರಂಭದಲ್ಲಿ 1549 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News