ವಿಟ್ಲ : ಎಸ್ಕೆಎಸ್ಸಸ್ಸೆಫ್ ಕಾರ್ಯಾಲಯ ಉದ್ಘಾಟನೆ, ಲೀಡರ್‍ಸ್ ಮೀಟ್ ಕಾರ್ಯಕ್ರಮ

Update: 2020-11-23 17:05 GMT

ವಿಟ್ಲ : ಯಾವುದೇ ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ  ಶಿಕ್ಷಣ ಅಗತ್ಯ ,ಸಣ್ಣ ಪುಟ್ಟ ವಿಷಯಗಳಿಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸಿ ಸಮುದಾಯದೊಳಗೆ ಅನೈಕ್ಯತೆ ಸೃಷ್ಟಿಸುವ ಬದಲು ಪ್ರತಿ ಮೊಹಲ್ಲಾಗಳಲ್ಲೂ ಸಂಘಸಂಸ್ಥೆಗಳು ಸುಶಿಕ್ಷಿತ ಹಾಗೂ ಪ್ರತಿಭಾವಂತ ಸಮಾಜ ಕಟ್ಟುವ ಅಜಂಡ ಹಾಕಿಕೊಂಡು ಕಾರ್ಯಪ್ರವೃತರಾಗಬೇಕು ಆಗ ಮಾತ್ರ ಬಲಿಷ್ಠ ಸಮಾಜ ಕಟ್ಟಲು ಸಾಧ್ಯ ಎಂದು ಎಸ್ಕೆಎಸ್ಸಸ್ಸೆಫ್ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ,ಕೇರಳದ ಖ್ಯಾತ ವಾಗ್ಮಿ ಅಬ್ದುಲ್ ಸತ್ತಾರ್ ಪಂದಲ್ಲೂರು ಅವರು ಹೇಳಿದರು.

ಅವರು ವಿಟ್ಲದಲ್ಲಿ ಎಸ್ಕೆಎಸ್ಸಸ್ಸೆಫ್ ವಿಟ್ಲ ವಲಯ ಘಟಕದ ನೂತನ ಕಾರ್ಯಾಲಯ ಉದ್ಘಾಟನೆ ಮತ್ತು ಲೀಡರ್‍ಸ್ ಮೀಟ್ ನಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು.

ಧಾರ್ಮಿಕ ಶಿಕ್ಷಣದ ಜೊತೆಗೆ ಉನ್ನತ ಲೌಕಿಕ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು , ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು ಈ ನಿಟ್ಟಿನಲ್ಲಿ ಎಸ್ಕೆಎಸ್ಸಸ್ಸೆಫ್ ನ ಅಂಗಸಂಸ್ಥೆ 'ಟ್ರೆಂಡ್ ' ನಿರಂತರ ಕಾರ್ಯಕ್ರಮ ಗಳನ್ನು ರೂಪಿಸುತ್ತಿದ್ದು, ಪ್ರತಿಯೊಬ್ಬರೂ ಇದರ ಜೊತೆ ಕೈಜೋಡಿಸಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ 'ಸಮಸ್ತ' ದ ಕೇಂದ್ರ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಮಾತನಾಡಿ, ಸೇವ ಕಾರ್ಯಕ್ಕೆ ಇಸ್ಲಾಂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಎಸ್ಕೆಎಸ್ಸಸ್ಸೆಫ್ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ನಿರತರಾದ ಪ್ರತಿಯೊಬ್ಬರೂ ದನ್ಯರು ಎಂದರು.

ಎಸ್ಕೆಎಸ್ಸಸ್ಸೆಫ್ ವಲಯಾಧ್ಯಕ್ಷ ಅಶ್ರಫ್ ಮಣಿಮಜಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಿತಿಯ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ವಲಯ ಉಸ್ತುವಾರಿ ತಾಜುದ್ದೀನ್ ರಹ್ಮಾನಿ ಬೆಳ್ಳಾರೆ, ,ಖಾಸಿಂ ದಾರಿಮಿ‌, ಸಿದ್ದೀಕ್ ಅಬ್ದುಲ್ ಖಾದರ್, ಅಬ್ಬಾಸ್ ದಾರಿಮಿ‌ ಕೆಲಿಂಜ, ಶಾಫಿ ಇರ್ಪಾನಿ ವಿಟ್ಲ, ಅಬ್ದುಲ್ ಹಕೀಂ ಪರ್ತಿಪ್ಪಾಡಿ, ವಿ. ಎಸ್. ಇಬ್ರಾಹಿಂ, ಶರೀಫ್ ಮೂಸಾ ಕುದ್ದುಪದವು , ಅಬ್ದುಲ್ ಗಫೂರ್ ಹನೀಫಿ,ಇಸ್ಮಾಯಿಲ್ ಹನೀಫಿ, ಇಬ್ರಾಹಿಂ ಝೈನಿ, ಎಂ.ಎಸ್.ಹಮೀದ್ ಪುಣಚ, ಇಸ್ಮಾಯಿಲ್ ಕಲ್ಕಾರ್ ಕನ್ಯಾನ, ರಿಯಾಝ್ ಕೆಲಿಂಜ, ಅಬ್ದುಲ್ ಕರೀಂ ಕುಂಪದಬೈಲು, ರಫೀಕ್ ಫೈಝಿ ಕನ್ಯಾನ, ಇಸ್ಹಾಕ್ ಕೌಸರಿ ಪರ್ಲೊಟ್ಟು, ಜಮಾಲ್ ಕೋಡಪದವು, ವಿ.ಪಿ.ಉಮರ್ ದಾರಿಮಿ ಪರ್ತಿಪ್ಪಾಡಿ, ಹಂಝ ಕುರಿಯಪ್ಪಾಡಿ, ಇಝ್ಝತ್ತ್ ಮುಹಮ್ಮದ್, ಸಿರಾಜುದ್ದೀನ್ ಮುಸ್ಲಿಯಾರ್, ಸಿರಾಜ್ ಮಣಿಲ, ರಝಾಕ್ ಮಂಚಿ, ಫಾರೂಕ್ ಪದವು,ಬಿ.ಎಂ. ಅಲಿ ಮೌಲವಿ ಕುಡ್ತಮುಗೇರು, ಹಕೀಂ ಮುಸ್ಲಿಯಾರ್ ಪರ್ತಿಪ್ಪಾಡಿ,ಮೂಸಾ ಕರೀಂ, ಸತ್ತಾರ್ ಪಟ್ಲ,ಇಲ್ಯಾಸ್ ಕೋಡಪದವು, ಶರೀಫ್ ಕೆಲಿಂಜ ಅಶ್ರಫ್ ಕುಂಡಡ್ಕ , ನಿಝಾರ್ ಮುಸ್ಲಿಯಾರ್, ಬದ್ರುದ್ದೀನ್ ಕುಕ್ಕಾಜೆ, ಸಲೀಮ್ ಬೈಲ್ ಕುಕ್ಕಾಜೆ, ರಫೀಕ್ ಫೈಝಿ ಕುಕ್ಕಿಲ, ಬದ್ರುದ್ದೀನ್ ಮರಕ್ಕಿಣಿ ಮೊದಲಾದವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಇಸ್ಕೇ ಮದೀನಾ ಸಮಾರೋಪದ ಪ್ರಯುಕ್ತ ಮೌಲಿದ್ ಪಾರಾಯಣ ನಡೆಯಿತು, ಸಮಿತಿಯ ನೂತನ ಕಾರ್ಯಾಲಯವನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮುಸ್ಲಿಯಾರ್ ಕಡಂಬು ಸ್ವಾಗತಿಸಿದರು. ಕೆ.ಎಂ.ಎ.ಕೊಡುಂಗಾಯಿ ಪ್ರಸ್ತಾವಿಕವಾಗಿ ಮಾತನಾಡಿ, ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News