‘ಹಿಂದೂಸ್ತಾನ’ದ ಬದಲಿಗೆ ‘ಭಾರತ’ ಪದ ಬಳಸಬೇಕು: ವಿವಾದ ಸೃಷ್ಟಿಸಿದ ಎಐಎಂಐಎಂ ಶಾಸಕನ ಹೇಳಿಕೆ

Update: 2020-11-23 17:21 GMT

ಪಾಟ್ನಾ, ನ. 23: ಹದಿನೇಳನೇ ಬಿಹಾರ್ ವಿಧಾನ ಸಭೆಯ ಮೊದಲ ಅಧಿವೇಶನ ಸೋಮವಾರ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದರೊಂದಿಗೆ ಆರಂಭವಾಯಿತು. ಆದರೆ, ಎಐಎಂಐಎಂ ಶಾಸಕ ‘ಹಿಂದೂಸ್ತಾನ’ ಪದದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಪ್ರಮಾಣ ವಚನ ಸ್ವೀಕರಿಸುವ ಸಂದರ್ಭ ಹಿಂದೂಸ್ತಾನದ ಬದಲಿಗೆ ‘ಭಾರತ’ ಪದ ಬಳಸಬೇಕೆಂದು ಒತ್ತಾಯಿಸಿರುವುದು ವಿವಾದಕ್ಕೆ ಕಾರಣವಾಯಿತು.

‘ಭಾರತ’ ಎಂಬ ಪದವನ್ನು ಹಾಗೆಯೇ ಉರ್ದುವಿನಲ್ಲಿ ಪ್ರಮಾಣ ವಚನಕ್ಕಾಗಿ ಬಳಸಬೇಕಾಗಿತ್ತು. ಆದರೆ, ಹಿಂದೂಸ್ತಾನ ಪದ ಬಳಕೆಗೆ ತನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಎಐಎಂಐಎಂನ ಬಿಹಾರದ ಅಧ್ಯಕ್ಷ ಅಖ್ತರುಲ್ ಇಮಾಮ್ ಹೇಳಿದರು. ಅಲ್ಲದೆ, ತಾನು ಉರ್ದು ಮಾತನಾಡುವ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದೇನೆ ಎಂಬ ಪ್ರತಿಪಾದನೆಯನ್ನು ನಿರಾಕರಿಸಿದರು.

ಸಂವಿಧಾನದಂತೆ ಸ್ವೀಕರಿಸುವ ಪ್ರಮಾಣವಚನದಲ್ಲಿ ಎಲ್ಲೆಡೆ ‘ಭಾರತ’ ಎಂದು ಉಲ್ಲೇಖಿಸಲಾಗಿದೆ. ಇಂದು ಪ್ರಮಾಣ ವಚನ ಸ್ವೀಕರಿಸುವಾಗ ‘ಹಿಂದೂಸ್ತಾನ’ ಎಂದು ಹೇಳಬೇಕೇ ಅಥವಾ ‘ಭಾರತ’ ಎಂದು ಹೇಳಬೇಕೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ನಾವು ಶಾಸಕರು, ನಾವು ಸಂವಿಧಾನವನ್ನು ಎಲ್ಲರಗಿಂತ ಮೇಲೆ ಇರಿಸಬೇಕು ಎಂದರು.

ಹಂಗಾಮಿ ಸ್ವೀಕರ್ ಜಿತನ್ ರಾಮ್ ಮಾಂಝಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ‘ಭಾರತ’ ಪದ ಬಳಸಲು ಇಮಾಮ್‌ಗೆ ಅವಕಾಶ ನೀಡಿದರು. ಈ ಹಿನ್ನೆಲೆಯಲ್ಲಿ ಆಡಳಿತರೂಡ ಬಿಜೆಪಿ-ಜೆಡಿಯು ಮೈತ್ರಿ ಪಟ್ಟು ಬಿಡದೆ ಎಐಎಂಐಎಂ ಶಾಸಕನ ವಿರುದ್ಧ ವಾಗ್ದಾಳಿ ನಡೆಸಿತು. ಅವರು ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿತು.

‘ಹಿಂದೂಸ್ತಾನ’ ಪದವನ್ನು ಉಚ್ಚರಿಸಲು ಸಮಸ್ಯೆ ಇರುವವರು ಪಾಕಿಸ್ತಾನಕಕ್ಕೆ ಹೋಗಲಿ ಎಂದು ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿ ಹೇಳಿತು.

‘ಹಿಂದೂಸ್ತಾನ’ ಸಾಮಾನ್ಯವಾಗಿ ಬಳಸುವ ಪದ. ಆದರೆ, ಕೆಲವರು ವಿಭಿನ್ನವಾಗಿ ನೋಡುವ ಮೂಲಕ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಜೆಡಿಯುನ ನಾಯಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News