ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಸೂಚನೆ
Update: 2020-11-24 19:10 IST
ಉಡುಪಿ, ನ. 24: ಉಡುಪಿ ನಗರಸಭಾ ವ್ಯಾಪ್ತಿಯ ಉದ್ದಿಮೆದಾರರು ಪ್ರಸಕ್ತ ಸಾಲಿನಲ್ಲಿ ‘ವ್ಯಾಪಾರ’ ಆನ್‌ಲೈನ್ ತಂತ್ರಾಂಶದ ಮೂಲಕ ಸೃಜಿಸಿದ ಡಿಜಿಟಲ್ ಸಹಿವುಳ್ಳ ಉದ್ದಿಮೆ ಪರವಾನಿಗೆಯನ್ನು ನವೀಕರಿಸದೇ ಬಾಕಿ ಇರಿಸಿಕೊಂಡಿ ರುವುದು ಕಂಡುಬಂದಿದ್ದು, ದಂಡನೆ ಸಮೇತ ನ.30ರೊಳಗೆ ನಿಯಮಾನುಸಾರ ನಗರಸಬಾ ಕಚೇರಿಗೆ ಅರ್ಜಿ ಸಲ್ಲಿಸಿ ನವೀಕರಿಸಿಕೊಳ್ಳುವಂತೆ ನಗರಸಬೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.