ನ.26ರ ಮುಷ್ಕರ ಬೆಂಬಲಿಸುವಂತೆ ನಾಗರಿಕರಲ್ಲಿ ಮನವಿ

Update: 2020-11-24 15:07 GMT

ಕುಂದಾಪುರ, ನ.24: ದೇಶದಾದ್ಯಂತ ಜನತೆಯ ಹಕ್ಕುಗಳು ಹಾಗೂ ಕೋವಿಡ್ -19 ಪರಿಹಾರಕ್ಕೆ ಆಗ್ರಹಿಸಿ ಮತ್ತು ಕಾರ್ಮಿಕ ಕಾನೂನು ತಿದ್ದುಪಡಿ ವಿರೋಧಿಸಿ ನ.26ರಂದು ನಡೆಯುವ ಮುಷ್ಕರವನ್ನು ಬೆಂಬಲಿಸುವಂತೆ ಜೆಸಿಟಿಯ ಸಂಘಟನೆಯು ಇಂದು ಕುಂದಾಪುರದ ನಾಗರಿಕರಲ್ಲಿ ಮನವಿ ಮಾಡಿತು.

ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟಕೊಳಗಾದ ಚಾಲಕರಿಗೆ ಹಾಗೂ ಕಾರ್ಮಿಕ ರಿಗೆ ಬಾಕಿ ಇರುವ ಕೋವಿಡ್ ಪರಿಹಾರ ಒದಗಿಸಬೇಕು. ಬೆಲೆ ಏರಿಕೆಗೆ ಕಾರಣವಾಗುವ ಖಾಸಗೀಕರಣ ನೀತಿ ಕೈಬಿಡಬೇಕು. ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿ ಅನುಸರಿಸಬೇಕೆಂಬ ಬೇಡಿಕೆ ಗಳಿಗಾಗಿ ನಡೆಯುವ ಮುಷ್ಕರ ಸ್ವಯಂ ಪ್ರೇರಿತರಾಗಿ ಬೆಂಬಲಿಸಿ ಎಂದು ಮನವಿ ಮಾಡಲಾಯಿತು.

ಈ ವೇಳೆಯಲ್ಲಿ ಜೆಸಿಟಿಯು ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ ಲಕ್ಷ್ಮಣ ಬರೇಕಟ್ಟು, ಶಶಿರಾಜ್ ಮೊದಲಾದವರು ಉಪಸ್ಥಿತರಿದ್ದರು.

ಬೈಂದೂರಿನಲ್ಲೂ ಮನವಿ: ನ.26ರಂದು ದೇಶವ್ಯಾಪಿ ಜರಗುವ ಅಖಿಲ ಭಾರತ ಮುಷ್ಕರವನ್ನು ಯಶಸ್ವಿ ಗೊಳಿಸಲು ಬೆಂಬಲ ಕೋರಿ ಬೈಂದೂರು ಪೇಟೆ ಯಲ್ಲಿ ಇಂದು ಕರಪತ್ರ ವಿತರಣೆ ಮಾಡಿ ವ್ಯಾಪಕ ಪ್ರಚಾರ ನಡೆಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಗಣೇಶ ತೊಂಡೆಮಕ್ಕಿ, ಮಂಜು ಪಡುವರಿ, ಶ್ರೀಧರ ಉಪ್ಪುಂದ, ರಾಜು ದೇವಾಡಿಗ, ಅಮ್ಮಯ್ಯ ಪೂಜಾರಿ ಬಿಜೂರು, ವೆಂಕಟೇಶ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕರ ಬೆಂಬಲ: ನ.26ರಂದು ಕಾರ್ಮಿಕ ಸಂಘಗಳು ನೀಡಿದ ಮುಷ್ಕರದ ಕರೆಗೆ ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಆ ದಿನ ಕಟ್ಟಡ ನಿರ್ಮಾಣ ಕಾರ್ಮಿಕರ ಕೆಲಸವನ್ನು ಸ್ಥಗಿತಗೊಳಿಸಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಶೇಖರ್ ಬಂಗೇರ ಹಾಗೂ ಕಾರ್ಯದರ್ಶಿ ಬಾಲ ಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News