ಬಿಹಾರ: ಸ್ಪೀಕರ್ ಸ್ಥಾನಕ್ಕೆ ಎನ್‌ಡಿಎ- ಮಹಾಮೈತ್ರಿಕೂಟ ಸ್ಪರ್ಧೆ

Update: 2020-11-24 15:36 GMT

ಪಾಟ್ನಾ, ನ.24: ಎನ್‌ಡಿಎ ಮತ್ತು ಮಹಾಮೈತ್ರಿಕೂಟ ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಗಳ ಹೆಸರನ್ನು ಮಂಗಳವಾರ ಘೋಷಿಸಿವೆ. ಬಿಜೆಪಿ ಶಾಸಕ ಬಿಜಯ್ ಸಿನ್ಹಾರ ಹೆಸರನ್ನು ಎನ್‌ಡಿಎ ಘೋಷಿಸಿದರೆ, ಮಹಾಮೈತ್ರಿಕೂಟವು ಆರ್‌ಜೆಡಿ ಶಾಸಕ ಅವಧ್ ಬಿಹಾರಿ ಚೌಧರಿಯ ಹೆಸರನ್ನು ಘೋಷಿಸಿದೆ.

ಪಕ್ಷದ ಮತ್ತು ಎನ್‌ಡಿಎ ಮೈತ್ರಿಕೂಟದ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತೇವೆ. ಮೈತ್ರಿಕೂಟದ ನಿರ್ಧಾರದಂತೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗಿದೆ ಎಂದು ನಾಮಪತ್ರ ಸಲ್ಲಿಸಿದ ಬಳಿಕ ಸಿನ್ಹಾ ಮಾಧ್ಯಮದವರಿಗೆ ತಿಳಿಸಿದ್ದಾರೆ. 243 ಸದಸ್ಯಬಲದ ಬಿಹಾರ ವಿಧಾನಸಭೆಯ ಚಳಿಗಾಲದ ಅಧಿವೇಶನ ನವೆಂಬರ್ 27ರಿಂದ ಆರಂಭವಾಗಲಿದ್ದು ಮೊದಲ ದಿನ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ 125 ಸ್ಥಾನ (ಬಿಜೆಪಿ 74, ಜೆಡಿಯು 43 ಹಾಗೂ ಮಿತ್ರಪಕ್ಷದ 2 ಸದಸ್ಯರು) ಗಳಿಸಿ ಬಹುಮತ ಪಡೆದಿದೆ. ಮಹಾಮೈತ್ರಿಕೂಟ 110 ಸ್ಥಾನ ಗಳಿಸಿದೆ. ಇತರರು 8 ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News