ಸರಕಾರಿ ಆಸ್ಪತ್ರೆಗಳಿಗೆ ಕೋವಿಡ್ ಸಲಕರಣೆಗಳ ಹಸ್ತಾಂತರ

Update: 2020-11-24 16:34 GMT

ಮಂಗಳೂರು, ನ.24: ಕೊರೋನ ಸೈನಿಕ್ ಟಾಸ್ಕ್ ಫೋರ್ಸ್‌ನ ಅಧ್ಯಕ್ಷ ಡಾ.ಪಿ.ಆರ್.ಎಸ್.ಚೇತನ್ ಹಾಗೂ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಡಾ.ನಾಗರಾಜ್ ವಿ.ಬೈರಿ ಅವರ ಸಹಕಾರದಿಂದ ಸಿಮನ್ಸ್ ಇಂಡಿಯಾ ಹಾಗೂ ನಸ್‌ಕೊಮ್ ಫೌಂಡೇಷನ್, ಲಯನ್ಸ್ ಜಿಲ್ಲೆ 317 ಡಿ. ಮೂಲಕ ಒದಗಿಸಿದ 20 ಲಕ್ಷ ರೂ. ಮೌಲ್ಯದ ಕೋವಿಡ್ ಸಲಕರಣೆಗಳನ್ನು ನಗರದ ಲೇಡಿಗೋಷನ್ ಹಾಗೂ ಇನ್ನಿತರ ಸರಕಾರಿ ಆಸ್ಪತ್ರೆಗಳಿಗೆ ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.

ಲಯನ್ಸ್ ಕ್ಲಬ್ ಜಿಲ್ಲೆ 317 ಡಿ ಇದರ ಜಿಲ್ಲಾ ರಾಜ್ಯಪಾಲ ಲಯನ್ ಡಾ. ಗೀತಾ ಪ್ರಕಾಶ್ ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಡಾ.ದುರ್ಗಾ ಪ್ರಸಾದ್, ಮಂಗಳೂರು ಮನಪಾ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪೂರ್ಣಿಮಾ, ಜಿಲ್ಲಾ ಪ್ರಥಮ ವಿಡಿಜಿ ಲಯನ್ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಲಯನ್ ಸಿ.ಪಿ. ದಿನೇಶ್, ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಇಕ್ಬಾಲ್ ಮಾತನಾಡಿದರು.

ಜಿಲ್ಲಾ ಸಂಪುಟ ಸೇವಾ ಸಂಯೋಜಕ ಜಿ.ಆರ್.ಶೆಟ್ಟಿ, ಹೆಚ್ಚುವರಿ ರಾಜ್ಯಪಾಲರ ಸಹ ಸಂಯೋಜಕ ವಿ.ಗಂಗಾಧರ್, ನಿಕಟ ಪೂರ್ವ ರಾಜ್ಯಪಾಲರಾದ ಜೆ.ಕೆ.ರಾವ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಪ್ರವೀಣ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಜಿಎಸ್‌ಟಿ ವಿಭಾಗದ ಅಧ್ಯಕ್ಷ ಬ್ರಹ್ಮಂಮ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News