ಚೀನಾ ಆಕ್ರಮಣ ಎದುರಿಸಲು ಸಬ್‌ಮರೀನ್ ನಿರ್ಮಾಣಕ್ಕಿಳಿದ ತೈವಾನ್

Update: 2020-11-24 18:37 GMT

ತೈಪೆ (ತೈವಾನ್), ನ. 24: ಚೀನಾದ ಆಕ್ರಮಣದಿಂದ ಕರಾವಳಿಯನ್ನು ರಕ್ಷಿಸುವ ಪ್ರಯತ್ನವಾಗಿ, ತೈವಾನ್ ತನ್ನ ಮೊದಲ ದೇಶಿ ನಿರ್ಮಿತ ಸಬ್‌ಮರೀನ್ ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದೆ.

ತೈವಾನ್‌ನ ನೂತನ ಸಬ್‌ಮರೀನ್ ಕಾರ್ಯಕ್ರಮದಡಿಯಲ್ಲಿ ಎಂಟು ಹೊಸ ಡೀಸೆಲ್ ಚಾಲಿತ ದಾಳಿ ಸಬ್‌ಮರೀನ್‌ಗಳನ್ನು ನಿರ್ಮಿಸಲಾಗುವುದು. ಇವುಗಳು ದೇಶದ ನೌಕಾ ಪಡೆಯನ್ನು ಸಾಕಷ್ಟು ಬಲಗೊಳಿಸಲಿವೆ. ಸದ್ಯಕ್ಕೆ ತೈವಾನ್ ಬಳಿ ಎರಡು ದ್ವಿತೀಯ ಮಹಾಯುದ್ಧ ಕಾಲದ ಯುದ್ಧನೌಕೆಗಳು ಮತ್ತು 1980ರ ದಶಕದಲ್ಲಿ ನಿರ್ಮಿಸಲಾಗಿರುವ ಎರಡು ಡಚ್ ನಿರ್ಮಿತ ಸಬ್‌ಮರೀನ್‌ಗಳಿವೆ.

ಮೊದಲ ಸಬ್‌ಮರೀನ್‌ನ ನಿರ್ಮಾಣ ಕಾರ್ಯ 2024ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News