2023ರ ವಿಶ್ವಕಪ್ ತನಕ ಆಡಲು ಟೇಲರ್ ಆಸಕ್ತಿ

Update: 2020-11-25 05:01 GMT

ವೆಲ್ಲಿಂಗ್ಟನ್, ನ.24: ಭಾರತದಲ್ಲಿ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತನಕ ಆಡುವುದನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ನ್ಯೂಝಿಲ್ಯಾಂಡ್‌ನ ಬ್ಯಾಟ್ಸ್‌ಮನ್ 36 ರ ಹರೆಯದ ರಾಸ್ ಟೇಲರ್ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ-20 ಸರಣಿ ಶುಕ್ರವಾರ ಆರಂಭವಾಗಲಿದ್ದು, ಇದಕ್ಕೂ ಮುನ್ನ ಟೇಲರ್ ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದರು.

ನ್ಯೂಝಿಲ್ಯಾಂಡ್ ಪರ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿರುವ ಟೇಲರ್ ತಮ್ಮ ದೇಶದ ಗರಿಷ್ಠ ಪಂದ್ಯಗಳನ್ನು ಆಡಿರುವ ಆಟಗಾರ ಎಂಬ ದಾಖಲೆಯನ್ನು ಈ ಋತುವಿನಲ್ಲಿ ನಿರ್ಮಿಸಲಿದ್ದಾರೆ. ಮಾಜಿ ನಾಯಕ ಡೇನಿಯಲ್ ವೆಟೋರಿ ನ್ಯೂಝಿಲ್ಯಾಂಡ್ ಪರ 437 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 112 ಟೆಸ್ಟ್, 291 ಏಕದಿನ ಮತ್ತು 34 ಟ್ವೆಂಟಿ -20 ಪಂದ್ಯಗಳು ಸೇರಿವೆ. ಟೇಲರ್ 101 ಟೆಸ್ಟ್, 232 ಏಕದಿನ ಮತ್ತು 100 ಟ್ವೆಂಟಿ-20 ಸೇರಿದಂತೆ 433 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ನ್ಯೂಝಿಲ್ಯಾಂಡ್ ಪರ ಒಂದು ಅಥವಾ ಎರಡು ಪಂದ್ಯಗಳನ್ನು ಆಡಲು ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News