‘ಬ್ಯಾರಿ ಆಂದೋಲನದಲ್ಲಿ ಪ್ರೊ. ಇಚ್ಲಂಗೋಡು’ ಪುಸ್ತಕ ಬಿಡುಗಡೆ

Update: 2020-11-25 11:23 GMT

ಮಂಗಳೂರು, ನ. 25: ಬ್ಯಾರಿ ಜನಾಂಗದ ಕುರಿತಂತೆ ಸಂಶೋಧನಾ ಬರಹಗಳ ಮೂಲಕ ಖ್ಯಾತಿ ಪಡೆದಿರುವ ಪ್ರೊ. ಇಚ್ಲಂಗೋಡು ಅವರ ಆಯ್ದ ಲೇಖನಗಳು ಮತ್ತು ಪತ್ರಿಕಾ ವರದಿಗಳನ್ನು ಒಳಗೊಂಡ ‘ಬ್ಯಾರಿ ಆಂದೋಲನದಲ್ಲಿ ಪ್ರೊ. ಇಚ್ಲಂಗೋಡು’ ಪುಸ್ತಕವನ್ನು ನಗರದ ಪ್ರೆಸ್‌ಕ್ಲಬ್ ‌ನಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.

ಕನ್ನಡ ಸಂಘ ಮೂಡಬಿದ್ರೆ ವಿಯಿಂದ ಪ್ರಕಟಿಸಲಾದ ಪುಸ್ತಕವನ್ನು ಸಾಮಾಜಿಕ ಕಾರ್ಯಕರ್ತ ಬಶೀ್ ಬೈಕಂಪಾಡಿ ಬಿಡುಗಡೆಗೊಳಿಸಿದರು.
ಕರ್ನಾಟಕ ಕರಾವಳಿಯಲ್ಲಿ ಬ್ಯಾರಿ ಜನಾಂಗದ ಆಡುಭಾಷೆಯನ್ನು ಬ್ಯಾರಿ ಭಾಷೆ ಎಂದು ಹೆಸರಿಸಿ ಅದನ್ನು ಭಾರತದ ಭಾಷಾಶಾಸ್ತ್ರ ಸಮೀಕ್ಷೆ ಯಲ್ಲಿ ದಾಖಲಿಸುವಲ್ಲಿ ಪ್ರೊ. ಇಚ್ಲಂಗೋಡು ಪಾತ್ರ ಮಹತ್ತರವಾದುದು. ಅಕಾಡೆಮಿ ಅಧ್ಯಯನ ಪೀಠ ಸ್ಥಾಪನೆ, ಬ್ಯಾರಿ ಭಾಷಾ ನಿಘಂಟು, ಪ್ರಥಮ ಬ್ಯಾರಿ ವ್ಯಾಕರಣ ಮೊದಲಾದ ಭಾಷಾಧ್ಯಯನಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಟ್ಟ ಪ್ರೊ. ಇಚ್ಲಂಗೋಡು ಅವರ ಬ್ಯಾರಿ ಜನಾಂಗ, ಭಾಷೆಗೆ ಸಂಬಂಧಿಸಿ ಸಂಶೋಧನಾ ಬರಹಗಳನ್ನು ಈ ಪುಸ್ತಕ ಹೊಂದಿದೆ ಎಂದು ಬಶೀರ್ ಬೈಕಂಪಾಡಿ ಹೇಳಿದರು.

ಪ್ರೊ. ಬಿ.ಎಂ. ಇಚ್ಲಂಗೋಡು ಮಾತನಾಡಿ, 1980ರಿಂದ ಇಂದಿನವರೆಗೆ ಬ್ಯಾರಿ ಸಂಸ್ಕೃತಿ, ಭಾಷೆಯ ಕುರಿತು ತಾನು ಮಾಡಿರುವ ಕಾರ್ಯವನ್ನು ದಾಖಲಿಸುುದು ಈ ಕೃತಿಯ ಉದ್ದೇಶ ಎಂದರು.

ಬ್ಯಾರಿಗಳೆನ್ನಲು ನಾಚಿಕೆಪಡುತ್ತಿದ್ದ ಸಮುದಾಯವನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ತಾನು ಮಾಡಿ ಪ್ರಯತ್ನದ ದಾಖಲೆ ಇದಾಗಿದೆ. ಮಲಯಾಳದ ಉಪ ಭಾ,ಎ, ಮಾಪ್ಲಾ ಮಲಯಾಳ ಎಂದು ತಪ್ಪಾಗಿ ಗುರುತಿಸಿಕೊಂಡಿದ್ದ ಭಾಷೆಗೆ ಇದು ಸ್ವತಂತ್ರ ಬ್ಯಾರಿ ಭಾಷೆ ಎಂದು ಹೆಸರಿಸಿ ಇದರ ಉಗಮದ ದಾಖಲೆಯನ್ನು ತೋರಿಸಿ ಮಲಯಾಳಕ್ಕಿಂತಲೂ ಇದು ಪ್ರಾಚೀನ ಭಾಷೆ ಎಂದು ತೋರಿಸಿದ್ದೇನೆ. ಅವೆಲ್ಲದರ ಕುರಿತಾದ ಸಮಗ್ರ ಚಿತ್ರಣವನ್ನು ಈ ಪುಸ್ತಕದಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ ಎಂದರು.

ಪುಸ್ತಕ ಬಿಡುಗಡೆ ಸಂದರ್ಭ ಕನ್ನಡ ಸಂಘದ ಕಾರ್ಯದರ್ಶಿ ಜೀವ್ ಮತ್ತು ಹ್ಯಾರಿಸ್ ಉಪಸಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News