ನ. 28 : ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ

Update: 2020-11-25 11:58 GMT

ಮಂಗಳೂರು, ನ. 25: ಮುಂಬರುವ ಗ್ರಾಮ ಪಂಚಾಯತ್  ಚುನಾವಣಾ ತಯಾರಿಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ನ.28ರಂದು ಬಿ.ಸಿ.ರೋಡ್ ಬೆಳಗ್ಗೆ ಮತ್ತು ಪುತ್ತೂರಿನಲ್ಲಿ ಅಪರಾಹ್ನ ದ.ಕ ಜಿಲ್ಲಾ ಬಿಜೆಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯ ಮಂತ್ರಿ ಡಾ.ಅಶ್ವಥ್ ನಾರಾಯಣ, ಸಂಸದೆ ಶೋಭ ಕರಂ ದ್ಲಾಜೆ,ಉಸ್ತುವಾರಿ ಸಚಿವ ಕೋಟ ಶ್ರೀ ನಿವಾಸ ಪೂಜಾರಿ,ಶಾಸಕರು ಗ್ರಾಮ ಪಂಚಾಯತ್ ನಿಂದ ಮೇಲ್ಪಟ್ಟ ವಿವಿಧ ಘಟಕದ ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಬಿ.ಸಿ.ರೋಡಿನ ಸ್ಪರ್ಶ ಸಭಾಂಗಣದಲ್ಲಿ ನ. 28ರಂದು ಬೆಳಗ್ಗೆ ಸಮಾವೇಶ ದ ಉದ್ಘಾಟನೆ ನಡೆಯಲಿದೆ.ಈ ಸಮಾವೇಶದಲ್ಲಿ ಮೂಡುಬಿದಿರೆ, ಮಂಗಳೂರು ಉತ್ತರ ಮತ್ತು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿವಿಧ ಘಟಕದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.ಅಪರಾಹ್ನ 2.30 ಗಂಟೆಗೆ ಪುತ್ತೂರಿನ ಕೋಟೆಚಾ ಸಭಾಂಗಣದಲ್ಲಿ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿ ಗಳು ಭಾಗವಹಿಸಲಿ ದ್ದಾರೆ ಎಂದು ಸುದರ್ಶನ್ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಸಜ್ಜು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಗೆ ಬಿಜೆಪಿ ಸಜ್ಜುಗೊಂಡಿದೆ. ಈಗಾಗಲೇ 218 ಗ್ರಾಮ ಪಂಚಾಯತ್ ಗಳಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ನಡೆದಿದೆ.1186 ಮತದಾನ ಕೇಂದ್ರ ವ್ಯಾಪ್ತಿಯಲ್ಲಿ ಪಂಚರತ್ನರ ನೇಮಕ ಆಗಿದೆ.20ಸಾವಿರ ಪೇಜ್ ಪ್ರಮುಖ ರ ಆಯ್ಕೆ ನಡೆದಿದೆ. ಜಿಲ್ಲೆಯ ಒಟ್ಟು  228ಗ್ರಾಮ ಪಂಚಾಯತ್ ಗಳ ಪೈಕಿ ಈ ಬಾರಿ ನಡೆಯಲಿರುವ 225ಗ್ರಾಮ ಪಂಚಾಯತ್ ಗಳ ಪೈಕಿ 148ರಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ರು ಅಧಿಕಾರದಲ್ಲಿದ್ದಾರೆ ಮುಂದಿನ ಚುನಾವಣೆ ಯಲ್ಲಿ 200ಕ್ಕೂ ಅಧಿಕ ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಗುರಿಹೊಂದಿದೆ ಎಂದು ಸುದರ್ಶನ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಮುಖಂಡ ರಾದ ಕಸ್ತೂರಿ ಪಂಜ, ಜಗದೀಶ್ ಶೇಣವ, ಸುಧೀರ್ ಶೆಟ್ಟಿ, ರವಿ ಶಂಕರ್ ಮಿಜಾರ್, ಪೂಜಾ ಪೈ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News