ನಳ್ಳಿ ನೀರಿನ ಶುಲ್ಕ ಪಾವತಿಗೆ ಸೂಚನೆ

Update: 2020-11-25 12:27 GMT

ಉಡುಪಿ, ನ.25: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಸ್ತವ್ಯ / ವಾಣಿಜ್ಯ ನೀರಿನ ಬಳಕೆದಾರರು ನಳ್ಳಿ ನೀರಿನ ಜೋಡಣೆ ಬಾಬ್ತು ಪ್ರತೀ ತಿಂಗಳ ನೀರಿನ ಶುಲ್ಕವನ್ನು ನಿಗದಿತ ಅವಧಿಯೊಳಗೆ ಪಾವತಿಸುವಂತೆ ಹಾಗೂ ಬಾಕಿ ಮಾಡಿಕೊಂಡಿರುವ ನಳ್ಳಿ ನೀರಿನ ಶುಲ್ಕವನ್ನು ಡಿ.11ರೊಳಗೆ ಪಾವತಿಸು ವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಳ್ಳಿನೀರಿನ ಜೋಡಣೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಅವಕಾಶ ಕೊಡದೇ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News