ಕೋಡಿ ಬ್ಯಾರೀಸ್ ಸಂಸ್ಥೆಯಲ್ಲಿ ಸಾಧಕ ಗಣೇಶ ಪೂಜಾರಿಗೆ ಸನ್ಮಾನ

Update: 2020-11-28 11:40 GMT

ಕುಂದಾಪುರ, ನ. 25: ಫೋರ್ಬ್ಸ್ ಇಂಡಿಯಾ ಪ್ರಕಟಿಸಿದ ‘ಫೋರ್ಬ್ಸ್ ಇಂಡಿಯಾ ಟಾಪ್ 100 ಪೀಪಲ್ ಮ್ಯಾನೇಜರ್ಸ್‌ ಲೀಸ್ಟ್’ನಲ್ಲಿ ಸ್ಥಾನ ಪಡೆದ ಕುಂದಾಪುರ ಕೋಡಿಯ ಗಣೇಶ್ ಪೂಜಾರಿ ಅವರನ್ನು ಅವರು ಕಲಿತ ಹಾಜಿ ಕೆ.ಮೊಹಿದ್ದಿನ್ ಬ್ಯಾರಿ ಸ್ಮಾರಕ ಪ್ರೌಢ ಶಾಲೆ ಕೋಡಿ ಇಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ತಾನು ಅಕ್ಷರಾಭ್ಯಾಸ ನಡೆಸಿ ಜೀವನದ ಪಾಠ ಕಲಿತ ಶಾಲೆಯ ವತಿಯಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಗಣೇಶ್ ಪೂಜಾರಿ, ಯಾವುದೇ ವ್ಯಕ್ತಿಯ ಸಾಧನೆಗೆ ಶಾಲೆಯಲ್ಲಿ ಕಲಿತ ಮಾಧ್ಯಮಗಳು ಮುಖ್ಯವಲ್ಲ. ಸತತ ಪರಿಶ್ರಮ ಮತ್ತು ಗುರಿ ಸಾಧಿಸುವ ಛಲ ಮನುಷ್ಯನನ್ನು ಉನ್ನತಿಯೆಡೆಗೆ ಕೊಂಡೊಯ್ಯುತ್ತದೆ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ ಮಾತನಾಡಿ, ಗಣೇಶ್ ಪೂಜಾರಿ ಅವರು ನಮ್ಮ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಪುರಸಭಾ ಸದಸ್ಯೆ ಕಮಲಾ, ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಸಲಹೆಗಾರರಾದ ಅಬುಷೇಕ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಅಂಚನ್ ಮತ್ತು ಮುಸ್ತರೀನ್ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಪ್ರಾಂಶುಪಾಲರಾದ ಡಾ. ಶಮೀರ್ ಮತ್ತು ಸಿದ್ದಪ್ಪಕೆ.ಎಸ್ ಉಪಸ್ಥಿತರಿದರು.

ಹಾಜಿ ಕೆ. ಮೊಹಿದ್ದಿನ್ ಬ್ಯಾರಿ ಸ್ಮಾರಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳ್ನಾಡಿದರು. ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಟ್ಟಿ ವಂದಿಸಿದರು. ಸಹ ಶಿಕ್ಷಕ ಜಯಶೀಲ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News