ಡಿ.11ರಿಂದ ಮೈಸೂರು-ಮಂಗಳೂರು ನಡುವೆ ವಿಮಾನ ಸೇವೆ

Update: 2020-11-25 16:17 GMT

 ಮಂಗಳೂರು, ನ.25: ಮೈಸೂರು ಮತ್ತು ಮಂಗಳೂರು ನಡುವೆ ‘ಅಲೈಯನ್ಸ್ ಏರ್’ ಸಂಸ್ಥೆಯ ವಿಮಾನಯಾನ ಸೇವೆಯು ಡಿ.11ರಿಂದ ಆರಂಭಗೊಳ್ಳಲಿದೆ.

ಏರ್ ಇಂಡಿಯಾದ ಅಂಗ ಸಂಸ್ಥೆಯಾದ ‘ಅಲೈಯನ್ಸ್ ಏರ್’ ಸಂಸ್ಥೆಯು ಮೈಸೂರು ಮತ್ತು ಮಂಗಳೂರನ್ನು ಸಂಪರ್ಕಿಸಲು ಎರಡು ವಿಮಾನಗಳುನ್ನು ಕಾರ್ಯಾಚರಣೆಗೆ ಇಳಿಸಿದೆ. ಬುಧವಾರ, ಶುಕ್ರವಾರ, ಶನಿವಾರ ಹಾಗೂ ರವಿವಾರ ಪ್ರಯಾಣಿಕರಿಗೆ ವಿಮಾನ ಸೇವೆ ಲಭ್ಯವಾಗಲಿದೆ.

‘ಫ್ಲೈಟ್ 9ಐ 532’ ವಿಮಾನವು ಮೈಸೂರಿನಿಂದ ಬೆಳಗ್ಗೆ 11:20ಕ್ಕೆ ಪ್ರಯಾಣ ಆರಂಭಿಸಿ ಮಧ್ಯಾಹ್ನ 12:30ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12:55ಕ್ಕೆ ನಿರ್ಗಮಿಸುವ ಇನ್ನೊಂದು ವಿಮಾನವು (9ಐ 533) ಮಧ್ಯಾಹ್ನ 1:55ಕ್ಕೆ ಮೈಸೂರನ್ನು ತಲುಪಲಿದೆ.

ಟಿಕೆಟ್ ಬುಕಿಂಗ್ ಗಾಗಿ www.airindia.in ಅಥವಾ ಸಂಸ್ಥೆಯ ಟ್ರಾವೆಲ್ ಏಜೆನ್ಸಿಗಳನ್ನು ಸಂಪರ್ಕಿಸಬಹುದು. ವಿಮಾನ ಸಂಸ್ಥೆಯು ಸರಕಾರದ ಮಾರ್ಗಸೂಚಿ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿದ ಕಾರ್ಯವಿಧಾನ (ಎಸ್‌ಒಪಿ) ಮೂಲಕ ಸೇವೆ ನೀಡಲಿದೆ ಎಂದು ಸಂಸ್ಥೆಯ ಪ್ರಟಕನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News