ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ದಿಲ್ಲಿಯತ್ತ ರ‍್ಯಾಲಿ: ಪೊಲೀಸರಿಂದ ಜಲಫಿರಂಗಿ ಪ್ರಯೋಗ

Update: 2020-11-25 16:40 GMT

ಚಂಡಿಗಢ (ಹರ್ಯಾಣ), ನ. 25: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದ ಕೃಷಿ ಕಾಯ್ದೆ ವಿರೋಧಿಸಿ ದಿಲ್ಲಿಯತ್ತ ಪ್ರತಿಭಟನಾ ರ‍್ಯಾಲಿ ನಡೆಸಲು ಯತ್ನಿಸಿದ ರೈತರ ಮೇಲೆ ಬುಧವಾರ ಹರ್ಯಾಣ ಪೊಲೀಸರು ಜಲಫಿರಂಗಿ ಬಳಸಿ ಅವರನ್ನು ಚದುರಿಸಿದರು.

ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲು ದಿಲ್ಲಿಯತ್ತ ತೆರಳಲು ಕುರುಕ್ಷೇತ್ರದಲ್ಲಿ ಸೇರಿದ್ದ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದರು. ಹೆದ್ದಾರಿಯಲ್ಲಿ ಅಳವಡಿಸಲಾದ ಬ್ಯಾರಿಕೇಡ್ ಸಮೀಪ ಸೇರಿದ ದೊಡ್ಡ ಸಂಖ್ಯೆಯ ರೈತರ ಮೇಲೆ ಪೊಲೀಸರು ಜಲಪಫಿರಂಗಿ ಬಳಸುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಇಂದು ಬೆಳಗ್ಗೆ ಹರ್ಯಾಣದ ರೈತ ನಾಯಕರು ನವೆಂಬರ್ 26 ಹಾಗೂ 27ರಂದು ‘ದಿಲ್ಲಿ ಚಲೊ’ಗೆ ಕರೆ ನೀಡಿದ್ದರು. ಈ ನಡುವೆ ನವೆಂಬರ್ 26 ಹಾಗೂ 27ರಂದು ಕೃಷಿ ಕಾಯ್ದೆ ವಿರುದ್ಧ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ವಿವಿಧ ರೈತ ಸಂಘಟನೆಗಳಿಂದ ಸ್ವೀಕರಿಸಿದ್ದ ಮನವಿಯನ್ನು ದಿಲ್ಲಿ ಪೊಲೀಸರು ತಿರಸ್ಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News